ರಾಣೇಬೆನ್ನೂರು, ನ.9- ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಹಾವೇರಿ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಪೀಡಿತ ಜಿಲ್ಲೆಯಂದು ಸರ್ಕಾರವೇ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ತುಂಗಾ ಮೇಲ್ದಂಡೆ ಯೋಜನೆಯ ನಿಯಮಾವಳಿಗಳ ಪ್ರಕಾರ ನಿಗದಿತ ವೇಳೆಗೆ ಕಾಲುವೆಗೆ ನೀರು ಹರಿಸುವಂತೆ ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಶಿವಮೊಗ್ಗದ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್‌ಗೆ ಪತ್ರ ಬರೆದು ವಿನಂತಿಸಿದ್ದಾರೆ.
ಪ್ರಸಕ್ತ ತೀವ್ರ ಬರಗಾಲದ ಸನ್ನಿವೇಶದಲ್ಲಿ ಅತ್ಯಂತ ಅವಶ್ಯವಾಗಿ ರೈತರು ಬೆಳೆದ ಸೂರ್ಯಕಾಂತಿ, ವಿಜಾಪುರ ಮತ್ತು ಹೈಬ್ರಿಡ್ ಊಟ ಮಾಡುವ ಜೋಳದ ಬೆಳೆಗಳಿಗೆ ಕೊನೆ ಘಳಿಗೆಯಲ್ಲಿ ಬೇಕಾಗಿರುವ ನೀರಿನ ಬವಣೆಯನ್ನು ನೀಗಿಸುವುದರ ಜೊತೆಗೆ ಜಾನುವಾರುಗಳಿಗೆ ಬೇಕಾಗುವ ಮೇವು ಬೆಳವಣಿಗೆಗೆ ಹಾಗೂ ಜಾನುವಾರು ಹಾಗೂ ಕಾಡುಪ್ರಾಣಿಗಳಿಗೆ ನೀರಿನ ಸಮಸ್ಯೆಯಾಗದಂತೆ ಇಲಾಖೆ ಎಚ್ಚರಿಸಬೇಕೆಂದು ವಿನಂತಿಸಿದ್ದಾರೆ.