ದಾವಣಗೆರೆ, ನ. 8- ಭಾರತ ಸೇವಾದಳ ದಾವಣಗೆರೆ ಜಿಲ್ಲೆಗೆ ಹೊಸ ಸಂಘಟಕರಾಗಿ ಫಕ್ಕೀರಗೌಡ ಹಳೇಮನಿ ಇವರನ್ನು ನೇಮಕ ಮಾಡಿ ಭಾರತ ಸೇವಾದಳ ಕೇಂದ್ರ ಕಛೇರಿಯಿಂದ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿರುತ್ತಾರೆ.
ಇಲ್ಲಿಯವರೆಗೆ ಉಡುಪಿ ಜಿಲ್ಲೆ ಭಾರತ ಸೇವಾದಳದ ಕಛೇರಿಯಲ್ಲಿ ಸಂಘಟಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು, ಕಳೆದ 3 ರಂದು ಭಾರತ ಸೇವಾದಳದ ದಾವಣಗೆರೆ ಕಛೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ದಾವಣಗೆರೆ ಜಿಲ್ಲಾ ಭಾರತ ಸೇವಾದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಘಟಕ ಎಂ.ಅಣ್ಣಪ್ಪ ಅವರ ವರ್ಗಾವಣೆಯಿಂದ ಈ ಸ್ಥಾನ ತೆರವುಗೊಂಡಿತ್ತು. ಹೊಸ ಸಂಘಟಕ ಫಕ್ಕೀರಗೌಡ ಹಳೇಮನಿಯವರಿಗೆ ತಮ್ಮ ಕಾರ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಿ, ದಾವಣಗೆರೆ ಜಿಲ್ಲಾ ಸೇವಾದಳ ಸಂಸ್ಥೆಗೆ ಒಳ್ಳೆಯ ಹೆಸರು ತರಲು ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಪ್ರೊ. ಹೆಚ್.ಚನ್ನಪ್ಪ ಪಲ್ಲಾಗಟ್ಟೆ ಎಲ್ಲರಲ್ಲೂ ಮನವಿ ಮಾಡಿದರು.