ದಾವಣಗೆರೆ, ನ. 8- ಲಿಂಗಾ ಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸೌಲಭ್ಯ ಕಲ್ಪಿಸು ವಂತೆ ಮತ್ತೆ ಹೋರಾಟ ಆರಂಭಿಸಿ ರುವ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಇದೇ 10ರಂದು ಬಾಡ ಕ್ರಾಸ್ ಬಳಿ ಇಷ್ಟಲಿಂಗ ಪೂಜೆ ನೆರವೇರಿಸಿ, ರಸ್ತೆ ತಡೆ ನಡೆಸಲಿದ್ದಾರೆ.
ಅಲ್ಲದೇ, ನಾಳೆ ದಿನಾಂಕ 9ರ ಗುರುವಾರ ಸ್ವಾಮೀಜಿಯವರು ಬೆಳಿಗ್ಗೆ 8-30ರಿಂದ ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆ ಗ್ರಾಮದಿಂದ ಪ್ರವಾಸ ಆರಂಭಿಸಿ ಸಾಲಕಟ್ಟೆ, ದೇವರ ಬೆಳಕೆರೆ, ಕುಣೆಬೆಳ ಕೆರೆ, ಬೂದಿ ಹಾಳು, ಗುಳದಹಳ್ಳಿ, ಸಂಕ್ಲೀಪುರ ಮಧ್ಯಾಹ್ನ 12 ಗಂಟೆಗೆ ನಂದಿತಾವರೆ ತಲುಪಿ, ನಂತರ ಜಿಗಳಿ, ಭಾ ನುವಳ್ಳಿ, ಕಮ ಲಾಪುರ, ಹೊಳೆಸಿರಿ ಗೆರೆ, ಎಳೆಹೊಳೆ, ಹುಲು ಗಿನಹೊಳೆ, ಧೂಳೆಹೊಳೆ, ನಂದಿ ಗಾವಿ, ರಾಮತೀರ್ಥ, ಗುತ್ತೂರು, ಹರಿಹರ ಟೆಂಪಲ್ ರಸ್ತೆಯ ಶ್ರೀ ರೇಣುಕಾ ಮಂದಿರ, ಕೆ.ಬೇವಿನಹಳ್ಳಿ ಮತ್ತು ಬನ್ನಿಕೋಡು ಗ್ರಾಮಗಳಿಗೆ ತೆರಳಲಿರು ವರು. ಪಂಚಮಸಾಲಿ ಸಮಾಜದ ಹರಿಹರ ತಾ. ಘಟಕ ಕಾರ್ಯಕ್ರಮವನ್ನು ಆಯೋಜಿಸಿದೆ.