ದಾವಣಗೆರೆ, ನ. 6 – ಕೆಪಿಎಸ್ಸಿ ಪರೀಕ್ಷೆಯಲ್ಲಿನ ಅಕ್ರಮ ತಡೆಯುವ ನಿಟ್ಟಿನಲ್ಲಿ ಪರೀಕ್ಷೆ ಬರೆಯುವ ಮಹಿಳಾ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವಾಗ ಅವರ ತಾಳಿ, ಕಾಲು, ಉಂಗುರ, ಹಾಗೂ ಕಿವಿ ಒಲೆಯನ್ನು ತೆಗೆಸುವ ಮೂಲಕ ಪರೀಕ್ಷಾರ್ಥಿಗಳಿಗೆ ಅವಮಾನ ಮಾಡಿದ್ದಾರೆ.
ಇದನ್ನು ಮಾಡುವ ಸಮಯದಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಎಂದೂ ಇಲ್ಲದ ಈ ಕಾನೂನನ್ನು ಜಾರಿಗೆ ತಂದಿರುವವರಾದರು ಯಾರು? ಎಂದು ಬಿಜೆಪಿ ಕಾನೂನು ಪ್ರಕೋಷ್ಟ ಜಿಲ್ಲಾ ಸಂಚಾಲಕ ಹೆಚ್.ದಿವಾಕರ್ ಮತ್ತು ರಾಜ್ಯ ಸಮಿತಿ ಸದಸ್ಯ ಎ. ಸಿ. ರಾಘವೇಂದ್ರ ಖಂಡಿಸಿದ್ದಾರೆ.