ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ `ನಮ್ಮ ನಡೆ ಆರೋಗ್ಯದೆಡೆ’ ಕಾರ್ಯಕ್ರಮದ ಅಂಗವಾಗಿ ಉಚಿತ ಸಮಾಲೋಚನೆ ಮತ್ತು ಆರೋಗ್ಯ ತಪಾಸಣಾ ಶಿಬಿರ ಹಾಗೂ ಶ್ರೀ ಶುಭಲಕ್ಷ್ಮಿ ಮಹಿಳಾ ಮಂಡಳಿ ಇವರ ಆಶ್ರಯದಲ್ಲಿ ಪರಿಣಿತ ವೈದ್ಯರಿಂದ ಉಚಿತ ಸಮಾಲೋಚನೆಯನ್ನು ಉಚಿತ ಆರೋಗ್ಯ ತಪಾಸಣೆ, ಸೂಕ್ತ ಸಲಹೆ ಹಾಗೂ ಚಿಕಿತ್ಸೆ ನೀಡಲಾಗುವುದು. ಚಿಕಿತ್ಸೆ ಮಹಿಳೆಯರಿಗೆ ಮಾತ್ರ ನೀಡಲಾಗುವುದು.
ಚಿಕಿತ್ಸೆಯು ಜಜಮು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದೊಂದಿಗೆ ನಡೆಯುವುದು. ಈ ಶಿಬಿರವು ವಿನೋಬನಗರದ ಶ್ರೀ ಶಂಭಲಿಂಗೇಶ್ವರ ದೇವಸ್ಥಾನ ಬಳಿಯ ಶ್ರೀಮತಿ ಪಾರ್ವತಮ್ಮ ಡಾ. ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಇಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನಡೆಯುವುದು. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, 17ನೇ ವಾರ್ಡ್ ಕಾಂಗ್ರೆಸ್ ಮಧು ಪವಾರ್ ಕೋರಿದ್ದಾರೆ.