ದಾವಣಗೆರೆ, ನ.6- ಶಾಮನೂರು ರಸ್ತೆ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದವರ ಬ್ಯಾಗ್ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯ ಮಸಾಲೆ ವ್ಯಾಪಾರಿ ಕಿರಣ್ ನಾಯ್ಕ ಆರ್ (26) ಬಂಧಿತ ಆರೋಪಿ. ಈತನಿಂದ 1.80 ಲಕ್ಷ ರೂ. ಬೆಲೆಯ 32 ಗ್ರಾಂ ಬಂಗಾರದ ಆಭರಣ ವಶ ಪಡಿಸಿಕೊಳ್ಳಲಾಗಿದೆ. ಆರೋಪಿತನ ಮೇಲೆ ದಾವಣಗೆರೆ ನಗರದ ವಿದ್ಯಾನಗರ, ಗಾಂಧಿನಗರ, ಬಸವನಗರ ಹಾಗೂ ಬಡಾವಣೆ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಪೊಲೀಸರು ಹಲವು ಬಾರಿ ಆರೋಪಿತನನ್ನು ದಸ್ತಗಿರಿ ಮಾಡಿದ್ದು, ವಾರೆಂಟ್ ಸಹ ಜಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಕಾಡೇನಹಳ್ಳಿ ಗ್ರಾಮದ ಶಿರಿಷ್ ಎನ್. ಎಂಬುವವರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಆರೋಪಿ ಪತ್ತೆ ಕಾರ್ಯದಲ್ಲಿ ವಿದ್ಯಾನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀಮತಿ ಪ್ರಭಾವತಿ.ಸಿ.ಶೇತಸನದಿ, ಪಿಎಸ್‌ಐ ವಿಜಯ್ ಎಂ., ರೇಣುಕಾ ಜಿ.ಎಂ, ಸಿಬ್ಬಂದಿಗಳಾದ ಆನಂದ ಮುಂದಲಮನಿ, ಯೋಗೀಶ್ ನಾಯ್ಕ, ಭೋಜಪ್ಪ ಕಿಚಡಿ, ಮಂಜಪ್ಪ.ಟಿ, ಗೋಪಿನಾಥ ಬಿ. ನಾಯ್ಕ, ಲಕ್ಷ್ಮಣ್ ಆರ್. ಶ್ರಮಿಸಿದ್ದಾರೆ.