ದಾವಣಗೆರೆ,ನ. 6- ನಗರದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಇದೇ ದಿನಾಂಕ 11ರ ಶನಿವಾರ ಬೆಳಿಗ್ಗೆ 9.30 ಕ್ಕೆ ಜಿಲ್ಲಾ ಮಟ್ಟದ, ಅಂತರ ಶಾಲಾ ಮಟ್ಟದ ಗೀತ ಗಾಯನ ಸ್ಪರ್ಧೆ ಏರ್ಪಡಿಸಲಾಗಿದ್ದು, ಆಸಕ್ತ ಶಾಲಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ `ಸೋಮೇಶ್ವರ ಗಾನ ಸಿರಿ’ ಪ್ರಶಸ್ತಿ ಹಾಗೂ 5 ಸಾವಿರ ರೂಪಾಯಿ ನೀಡಲಾಗುವುದು, ದ್ವಿತೀಯ ಬಹುಮಾನ ಪ್ರಶಸ್ತಿ ಪತ್ರದೊಂದಿಗೆ 3 ಸಾವಿರ ರೂ. ನೀಡಿ ಗೌರವಿಸಲಾಗುವುದೆಂದು ಶಾಲೆಯ ಗೌರವ ಕಾರ್ಯದರ್ಶಿ ಕೆ.ಎಂ ಸುರೇಶ್ ತಿಳಿಸಿದ್ದಾರೆ.