ಸರ್ಕಾರ-ಪಕ್ಷ ಎರಡರಲ್ಲೂ ಗೊಂದವಿಲ್ಲ : ಸಚಿವ ಭೈರೇಗೌಡ

ಸರ್ಕಾರ-ಪಕ್ಷ ಎರಡರಲ್ಲೂ ಗೊಂದವಿಲ್ಲ : ಸಚಿವ ಭೈರೇಗೌಡ

ದಾವಣಗೆರೆ, ನ.3- ಕಾಂಗ್ರೆಸ್‌ ಪಕ್ಷ, ಸರ್ಕಾರದಲ್ಲಾಗಲಿ ಯಾವುದೇ ಗೊಂದಲ ಇಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಸ್ಪಷ್ಟಪಡಿಸಿದ್ದಾರೆ.

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದ್ದು ಯಾವುದೇ ಗೊಂದಲ ಇಲ್ಲ. ಆದರೆ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷದ ನಾಯಕರಿಲ್ಲ. ಈ ವಿಷಯ ಮರೆಮಾಚಲು ಬಿಜೆಪಿಯವರು ದಿನಕ್ಕೊಂದು ಸುದ್ದಿ ಹರಡಿಸುತ್ತಿದ್ದಾರೆ ಎಂದರು.

ಮುಖ್ಯಮಂತ್ರಿ ಅಧಿಕಾರವಧಿ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ರಾಜ್ಯಕ್ಕೆ ಕೇಂದ್ರದ ಬರ ಅಧ್ಯಯನ ತಂಡ ಬಂದು ಹೋಗಿದೆ. ಒಟ್ಟು 17 ಸಾವಿರ ಕೋಟಿಯಷ್ಟು ಬೆಳೆ ಹಾನಿ ಅಂದಾಜಿಸಲಾಗಿದೆ ಎಂದು ಹೇಳಿದರು.

error: Content is protected !!