ಯೋಧ ಶಿವಕುಮಾರ್ ಸ್ವಾಗತಕ್ಕೆ ಯಲವಟ್ಟಿ ಸಜ್ಜು

ಯೋಧ ಶಿವಕುಮಾರ್ ಸ್ವಾಗತಕ್ಕೆ ಯಲವಟ್ಟಿ ಸಜ್ಜು

ಮಲೇಬೆನ್ನೂರು ಸಮೀಪದ ಯಲವಟ್ಟಿ ಗ್ರಾಮದ ದಿ. ಸಾವಿತ್ರಮ್ಮ ಮತ್ತು ದಿ. ಹಲಗೇರಿ ಕರಿಬಸಪ್ಪನವರ ಸುಪುತ್ರರಾದ ಹೆಚ್.ಶಿವಕುಮಾರ್ ಅವರು ಭಾರತೀಯ ಭೂ ಸೇನೆಯಲ್ಲಿ ಸುಧೀರ್ಘ 28 ವರ್ಷಗಳ ಕಾಲ ಸೇವೆ ಸಲ್ಲಿಸಿ, ಸೇವೆಯಿಂದ ನಿವೃತ್ತರಾಗಿ ಇಂದು ತಯ್ನಾಡಿಗೆ ಆಗಮಿಸುತ್ತಿದ್ದು, ಅವರನ್ನು ಸ್ವಾಗತಿಸಲು ಯಲವಟ್ಟಿ ಗ್ರಾಮ ನವ ವಧುವಿನಂತೆ ಸಿಂಗಾರಗೊಂಡಿದೆ.

ರೈಲು ಮೂಲಕ ಬೆಳಿಗ್ಗೆ 10 ಗಂಟೆಗೆ ಹರಿಹರಕ್ಕೆ ಆಗಮಿಸುವ ಸುಭೇದಾರ್ ಶಿವಕುಮಾರ್ ಅವರನ್ನು ಅಲ್ಲಿಂದಲೇ ತೆರೆದ ವಾಹನದಲ್ಲಿ ಯಲವಟ್ಟಿ ಗ್ರಾಮಕ್ಕೆ ಕರೆ ತರುವ ವ್ಯವಸ್ಥೆ ಯುವಕರು ಮಾಡಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಯಲವಟ್ಟಿ ಪ್ರವೇಶಿಸುವ ಶಿವಕುಮಾರ್ ಅವರನ್ನು ಪೂರ್ಣಕುಂಭ ಮೇಳ ಹಾಗೂ ವಿವಿಧ ಕಲಾ-ಮೇಳಗಳೊಂದಿಗೆ ಸ್ವಾಗತಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಲಿದ್ದಾರೆ.

ನಂತರ ಮಧ್ಯಾಹ್ನ 1.30ಕ್ಕೆ ಯಲವಟ್ಟಿಯ ಶ್ರೀ ಗುರು ಸಿದ್ಧಾಶ್ರಮದಲ್ಲಿ ಶ್ರೀ ಯೋಗಾನಂದ ಶ್ರೀಗಳವರ ಸಾನ್ನಿಧ್ಯದಲ್ಲಿ ಶಿವಕು ಮಾರ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿ, ಅಭಿನಂದಿಸಿದ್ದಾರೆ.

ಪರಿಚಯ : ಸುಬೇದಾರ್ ಹೆಚ್.ಶಿವಕುಮಾರ್ ಅವರು 1975 ರಲ್ಲಿ ಹಲಗೇರಿ ಕರಿಬಸಪ್ಪ ಮತ್ತು ಸಾವಿತ್ರಮ್ಮನವರ ಸುಪುತ್ರರಾಗಿ ಜನಿಸಿ, ಪ್ರಾಥಮಿಕ ಶಿಕ್ಷಣವನ್ನು ಯಲವಟ್ಟಿಯ ಸರ್ಕಾರಿ ಶಾಲೆಯಲ್ಲಿ ಮತ್ತು ಮಲೇಬೆನ್ನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದಿದ್ದಾರೆ. ರಾಣೇಬೆನ್ನೂರಿನ ಆರ್.ಟಿ.ಇ.ಎಸ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣ ಪಡೆದಿರುವ ಶಿವಕುಮಾರ್ ಅವರು
ಬಿ.ಎಸ್ಸಿ ದ್ವಿತೀಯ ವರ್ಷದ ವ್ಯಾಸಾಂಗ ಮಾಡುತ್ತಿರುವಾಗಲೇ ದಾವಣಗೆರೆಯಲ್ಲಿ ನಡೆದ ಮಿಲಿಟರಿ ಆಯ್ಕೆ ಪರೀಕ್ಷೆಯಲ್ಲಿ ಭಾಗವಹಿಸಿ, ದೈಹಿಕ ಪರೀಕ್ಷೆಯಲ್ಲಿ ಪಾಸಾಗಿ, ಲಿಖಿತ ಪರೀಕ್ಷೆಯಲ್ಲಿ ಫೇಲ್ ಆಗುತ್ತಾರೆ.

ಸೇನೆ ಸೇರಲೇಬೇಕೆಂಬ ಛಲದಿಂದ ಎರಡನೇ ಪ್ರಯತ್ನದಲ್ಲಿ ಪಾಸಾಗಿ ಸಿಪಾಯಿ ಆಗಿ ನೇಮಕಾತಿ ಆಗಿ, ಬೆಳಗಾವಿಯಲ್ಲಿ ತರಬೇತಿ ಪೂರೈಸಿ, ಮೊದಲ ಸೇವೆಯನ್ನು ಸಿಕ್ಕಿಂನಲ್ಲಿ ಆರಂಭಿಸುತ್ತಾರೆ. ನಂತರ ಜೈಪುರ, ಜಮ್ಮು-ಕಾಶ್ಮೀರ, ಅಂಡಮಾನ್ – ನಿಕೋಬಾರ್, ದೆಹಲಿ, ಅರುಣಾಚಲ ಪ್ರದೇಶ, ಲೇಲಡಾಕ್ ಗಲ್ವಾನ್ ಮತ್ತು ಗುಜರಾತಿನ ಜಾಮ್‌ನಗರದಲ್ಲಿ ಸೇವೆ ಸಲ್ಲಿಸಿರುತ್ತಾರೆ.

ಶಿವಕುಮಾರ್ 2004ರಲ್ಲಿ ಹನಗವಾಡಿಯ ಶ್ವೇತಾ ಅವರನ್ನು ವಿವಾಹವಾಗಿರುತ್ತಾರೆ.

error: Content is protected !!