`ಕಣಕಣದಲ್ಲೂ ಕನ್ನಡ’ ಆಲ್ಬಂ ಸಾಂಗ್ ಇಂದು ಬಿಡುಗಡೆ

ದಾವಣಗೆರೆ, ಅ. 31- ದಾವಣಗೆರೆ ಯುವ ಪ್ರತಿಭೆಗಳು ನಟಿಸಿ, ನಿರ್ದೇಶಿಸಿರುವ ಕಣಕಣದಲ್ಲೂ ಕನ್ನಡ ಯೂಟ್ಯೂಬ್ ಆಲ್ಬಂ ಸಾಂಗ್  ನಾಳೆ ದಿನಾಂಕ 1ರ ಬುಧವಾರ ಬಿಡುಗಡೆಯಾಗಲಿದೆ ಎಂದು ಸಂಗೀತ ಶಿಕ್ಷಕ ಚೇತನ್ ಕುಮಾರ್ ಜೆ. ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಾಮಕರಣವಾಗಿ 50 ವರ್ಷವಾದ ಹಿನ್ನೆಲೆಯಲ್ಲಿ ಈ ಹಾಡು ನಿರ್ಮಿಸಲಾಗಿದೆ. ಆನಗೋಡು ಹಾಗೂ ದಾವಣಗೆರೆ ಸುತ್ತ ಮುತ್ತ 3 ದಿನ ಚಿತ್ರೀಕರಣ ನಡೆಸಲಾಗಿದೆ. ಶೆಟ್ರು ವೀರಭದ್ರ ಕೋಗಳಿ ಹಾಡು ಬರೆದಿದ್ದಾರೆ. ಎಲ್. ಉಜ್ವಲ್ ನಿರ್ದೇಶಿಸಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಎಲ್. ಉಜ್ವಲ್ ಕುಮಾರ್, ಹೆಚ್.ಆರ್. ಬಸವರಾಜ್ ಇದ್ದರು.

error: Content is protected !!