ನಾಳೆ ಯೋಧ ಶಿವಕುಮಾರ್‌ಗೆ ಸ್ವಾಗತ

ನಾಳೆ ಯೋಧ ಶಿವಕುಮಾರ್‌ಗೆ ಸ್ವಾಗತ

ಮಲೇಬೆನ್ನೂರು, ಅ.30- ಭಾರತೀಯ ಭೂ ಸೇನೆಯಲ್ಲಿ 28 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ, ಸೇವೆಯಿಂದ ನಿವೃತ್ತಿಯಾಗಿ ನವೆಂಬರ್ 1 ರಂದು ತಾಯ್ನಾಡಿಗೆ ಆಗಮಿಸುತ್ತಿರುವ ಸುಬೇದಾರ್ ಹೆಚ್.ಶಿವಕುಮಾರ್ ಅವರಿಗೆ ಯಲವಟ್ಟಿ ಗ್ರಾಮಸ್ಥರು ಸ್ವಾಗತ ಹಾಗೂ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ.

ನವೆಂಬರ್ 1ರ ಬುಧವಾರ ಮಧ್ಯಾಹ್ನ 12 ಗಂಟೆಗೆ ಯಲವಟ್ಟಿ ಗ್ರಾಮಕ್ಕೆ ಆಗಮಿಸುವ ಶಿವಕುಮಾರ್ ಅವರನ್ನು ಮಹಿಳೆಯರು ಪೂರ್ಣಕುಂಭ ಮೇಳ ಹಾಗೂ ಡೊಳ್ಳು, ಹಲಗೆ ಸೇರಿದಂತೆ ಕಲಾಮೇಳಗಳೊಂದಿಗೆ ಸ್ವಾಗತ ಮಾಡಿಕೊಂಡು ನಂತರ ಗ್ರಾಮದಲ್ಲಿ ಗ್ರಾಮಸ್ಥರು ಅವರ ಮೆರವಣಿಗೆ ಮಾಡಲಿದ್ದಾರೆ. 

ಮೆರವಣಿಗೆ ನಂತರ ಮಧ್ಯಾಹ್ನ 1.30ಕ್ಕೆ ಶ್ರೀ ಗುರು ಸಿದ್ಧಾಶ್ರಮದಲ್ಲಿ ಶ್ರೀ ಯೋಗಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸುಬೇದಾರ್ ಶಿವಕುಮಾರ್ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಗುವುದೆಂದು ಗ್ರಾಮದ ಎ.ಈಶ್ವರ್, ಪಿಎಸಿಎಸ್ ಸಿಇಓ ಶೇಖರಪ್ಪ ತಿಳಿಸಿದ್ದಾರೆ.

error: Content is protected !!