ದಾವಣಗೆರೆ, ಅ. 29- ಆರ್.ಜಿ. ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ 6ನೇ ಘಟಿಕೋತ್ಸವ ಕಾರ್ಯಕ್ರಮ ನಾಳೆ ದಿನಾಂಕ 30ರಂದು ಬೆಳಿಗ್ಗೆ 9 ಗಂಟೆಗೆ ಭಂಟರ ಭವನದಲ್ಲಿ ನಡೆಯಲಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾಲೇಜಿನ ಕನ್ನಡ ಉಪನ್ಯಾಸಕ ಶರಣ ಕುಮಾರ್ ಎಲ್.ಎಂ., ಮುಖ್ಯ ಅತಿಥಿಗಳಾಗಿ ದಾವಣಗೆರೆ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಬಿ.ಡಿ. ಕುಂಬಾರ್ ಹಾಗೂ ಹೊನ್ನಾವರದ ಎಸ್.ಡಿ.ಎಂ. ಕಾಲೇಜು ವಾಣಿಜ್ಯ ಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ವಿ ನಾಯಕ ಎಂ.ಭಂಡಾರಿ ಆಗಮಿಸಲಿ ದ್ದಾರೆ. ಕಾಲೇಜು ಮುಖ್ಯಸ್ಥರಾದ ಶ್ವೇತಾ ಗಾಂಧಿ, ಜಿ.ಕೆ. ಗೀತಾ, ಪಿ.ಎಸ್. ಶಿವ ಪ್ರಕಾಶ್ ಉಪಸ್ಥಿತರಿರಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಬಿ.ಎಸ್. ಸ್ವಪ್ನ, ನರೇಶ್ ಸಂಕೋಳ್, ರಕ್ಷಿತಾ ರೆಡ್ಡಿ, ಸಿರಿ ಸಾವಂತ್ ಇತರರು ಉಪಸ್ಥಿತರಿದ್ದರು.