ನಗರದಲ್ಲಿ ಸಾಮೂಹಿಕ ಶ್ರೀ ಗಾಯತ್ರಿ ಪೂಜೆ

ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಅಧ್ಯಾತ್ಮ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದಿಂದ ಪ್ರತೀ ತಿಂಗಳ ಹುಣ್ಣಿಮೆಯಂದು ಜಯದೇವ ವೃತ್ತದಲ್ಲಿರುವ ಶ್ರೀ ಶಂಕರ ಮಠದಲ್ಲಿ ನಡೆಸುವ ಸಾಮೂಹಿಕ ಶ್ರೀ ಗಾಯತ್ರಿ ಪೂಜೆ, ಉಪಾಸನೆ, ಶೀಗಿ ಹುಣ್ಣಿಮೆ ಅಂಗವಾಗಿ ಇಂದು ಬೆಳಿಗ್ಗೆ 7 ಗಂಟೆಗೆ ನಡೆಯಲಿದೆ ಎಂದು ಪರಿವಾರದ ಅಧ್ಯಕ್ಷರಾದ ಡಾ. ಸುಶೀಲಮ್ಮ ತಿಳಿಸಿದ್ದಾರೆ.  ಉತ್ತಮ್ ಚಂದ್ ಗಾಂಧಿ ಮತ್ತು ಕುಟುಂಬದವರು ಪೂಜಾ ಸೇವಾಕರ್ತರಾಗಿದ್ದಾರೆ ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

error: Content is protected !!