ಕನ್ನಡ ಗೀತೆ ಗಾಯನ, ಪ್ರಬಂಧ ಸ್ಪರ್ಧೆ

ದಾವಣಗೆರೆ, ಅ.26- ಜಿಲ್ಲಾ ವನಿತಾ ಸಾಹಿತ್ಯ ವೇದಿಕೆಯು ತನ್ನ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಗೀತೆಗಾಯನ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿದೆ ಎಂದು ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಮಲ್ಲಮ್ಮ ನಾಗರಾಜ್ ತಿಳಿಸಿದ್ದಾರೆ. ಕನ್ನಡ ಗೀತ ಗಾಯನ ಸ್ಪರ್ಧೆ : (ಕನ್ನಡ ನಾಡು, ನುಡಿ, ನೆಲ, ಜಲ, ಸಾಹಿತ್ಯ ಕುರಿತು) ಸ್ಪರ್ಧೆಯಲ್ಲಿ ಕನಿಷ್ಟ 4 ವಿದ್ಯಾರ್ಥಿಗಳು ಹಾಗೂ ಗರಿಷ್ಟ 6 ವಿದ್ಯಾರ್ಥಿಗಳಿರಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ ಎ೦ದು ಎರಡು ವಿಭಾಗಗಳಿವೆ.

ಪ್ರಬಂಧ ಸ್ಪರ್ಧೆ : ವಿಷಯ – `ಮಾಜಿ ಶಿಕ್ಷಣ ಸಚಿವೆ ಶ್ರೀಮತಿ ಡಾ. ಸಿ. ನಾಗಮ್ಮ ಕೇಶವಮೂರ್ತಿ ಯವರ ಬದುಕು ಮತ್ತು ಸಾಧನೆ’. ಪ್ರಬಂಧವು A4 ಹಾಳೆಯಲ್ಲಿ ಮೂರು ಪುಟಗಳ ಮಿತಿಯಲ್ಲಿರತಕ್ಕದ್ದು. ಪ್ರಬಂಧಗಳನ್ನು  ದಿನಾಂಕ 30ರ ಸೋಮವಾರದೊಳಗೆ ಕಳಿಸಬೇಕು.

error: Content is protected !!