ಸಂಸದರ ಸರ್ವಾಧಿಕಾರಿ ಧೋರಣೆಯಿಂದ ಬಿಜೆಪಿಗೆ ಹಿನ್ನಡೆ

ದಾವಣಗೆರೆ, 22- ಸಂಸದ ಜಿ.ಎಂ. ಸಿದ್ದೇಶ್ವರ ಅವರ ಸರ್ವಾಧಿಕಾರಿ ಧೋರಣೆಯಿಂದಾಗಿ ಜಿಲ್ಲೆಯಲ್ಲಿ ಪ್ರಬಲವಾಗಿ ರುವ ಬಿಜೆಪಿಗೆ ಹಿನ್ನಡೆ ಯಾಗುತ್ತಿದೆ. ಇದರಿಂದ ಕಾರ್ಯಕ ರ್ತರಲ್ಲಿ ಉಂಟಾಗುತ್ತಿರುವ ಗೊಂದಲವನ್ನು ನಿವಾರಣೆ ಮಾಡಲು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರು ಮಧ್ಯೆ ಪ್ರವೇಶಿಸಬೇಕೆಂದು ಬಿಜೆಪಿ ಮುಖಂಡ ಕಕ್ಕರಗೊಳ್ಳದ ಕೆ.ಪಿ. ಕಲ್ಲಿಂಗಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯ ಬಿಜೆಪಿ ಮುಖಂಡರ ವಿರುದ್ಧ ವಿನಾಕಾರಣ ಆರೋಪಗಳನ್ನು ಮಾಡುತ್ತಾ  ಉಚ್ಛಾಟನೆ ಮಾಡಿಸುತ್ತಿದ್ದಾರೆ. ಜಗಳೂರಿನ ಮಾಜಿ ಶಾಸಕ ಟಿ. ಗುರುಸಿದ್ಧನಗೌಡ, ಚನ್ನಗಿರಿಯ ಮಾಡಾಳು ವಿರೂಪಾಕ್ಷಪ್ಪ ಸೇರಿದಂತೆ, ಅನೇಕ ಮುಖಂಡರು, ಕಾರ್ಯಕರ್ತರನ್ನು ಪಕ್ಷದಿಂದ ದೂರ ಇಡುವ ಹುನ್ನಾರ ನಡೆಸುತ್ತಿದ್ದು, ಪಕ್ಷದ ಸಂಘಟನೆಗೆ ಧಕ್ಕೆ ಆಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದ ನಿಷ್ಠಾವಂತ ಮುಖಂಡರು, ಕಾರ್ಯಕರ್ತರನ್ನು ಪಕ್ಷದಿಂದ ಉಚ್ಚಾಟನೆ ಮಾಡುತ್ತಾ ಹೋದರೆ ಪಕ್ಷದ ಗತಿ ಏನು? ಎಂದು ಪ್ರಶ್ನಿಸಿರುವ ಕಲ್ಲಿಂಗಪ್ಪ, ರಾಜ್ಯದ ವರಿಷ್ಠರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಕೆಲವು ವ್ಯಕ್ತಿಗಳು ಎಂ.ಪಿ. ರೇಣುಕಾಚಾರ್ಯ ಅವರ ವಿರುದ್ಧ ಸುಳ್ಳು ಹೇಳಿಕೆ ನೀಡುತ್ತಿದ್ದು, ನಿಷ್ಠಾವಂತ ಕಾರ್ಯ ಕರ್ತರ ಮಾತಿಗೆ ಬೆಲೆ ಸಿಗದಂತಾಗಿದೆ. ಕೂಡಲೇ ನಾಯಕರು ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ದಂದೂರು ಜಯಪ್ರಕಾಶ್, ಪ್ರವೀಣ್ ಜಾಧವ್, ಅಗ್ನಿ ಸುರೇಶ್, ಪಿ.ಎಸ್. ರಾಜು, ಚೇತನ್ ಕುಮಾರ್, ಸಂದೀಪ್, ಅಜಯ್ ಕುಮಾರ್, ಸಿದ್ದೇಶ್, ಮಾರುತಿ ಮತ್ತಿತರರಿದ್ದರು. 

error: Content is protected !!