ದಾವಣಗೆರೆ, ಅ.18- ರಾಜಸ್ಥಾನದ ಉದಯಪುರ ಜಿಲ್ಲೆಯ ಮಹಾರಾಣ ಪ್ರತಾಪ್ ಖೇಲ್ ಗಾಂವ್ ಕ್ರಿಡಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಆಲ್ ಇಂಡಿಯಾ ಸಿವಿಲ್ ಸರ್ವೀಸ್ ಟೆನ್ನಿಸ್ ಟೂರ್ನಮೆಂಟ್ 2023-24ರಲ್ಲಿ ಕರ್ನಾಟಕ ತಂಡದಿಂದ ಪಂದ್ಯಾವಳಿಯಲ್ಲಿ ಭಾಗವಹಿಸಿದ ದಾವಣಗೆರೆಯ ಸಿ.ಜಿ ಆಸ್ಪತ್ರೆಯ ಅರವಳಿಕೆ ತಜ್ಞರಾದ ಡಾ. ಟಿ.ಜಿ. ಅನುಪಮಾ ಅವರು ಮಹಿಳೆಯರ ಡಬಲ್ಸ್‌ನಲ್ಲಿ ಚಿನ್ನ ಹಾಗೂ ಸಿಂಗಲ್ಸ್‌ನಲ್ಲಿ ಬೆಳ್ಳಿಯ ಪದಕ ಪಡೆದಿದ್ದಾರೆ ಎಂದು ಡಿಸ್ಟ್ರಿಕ್ಟ್ ಟೆನ್ನಿಸ್ ಅಸೋಸಿಯೇಷನ್‌ನ ತರಬೇತುದಾರ ಮಹಾಂತೇಶ್ ತಿಳಿಸಿದ್ದಾರೆ.
ರಾಷ್ಟ್ರ ಮಟ್ಟದ ಟೆನ್ನಿಸ್‌ನಲ್ಲಿ ಡಾ. ಟಿ.ಜಿ. ಅನುಪಮಗೆ ಚಿನ್ನ
