ಕಕ್ಕರಗೊಳ್ಳದ ವಿನಯ್‍ಕುಮಾರ್ ಜಿ.ಬಿ. ಅಭಿಮಾನಿ ಬಳಗದ ಆಶ್ರಯದಲ್ಲಿ ವಿಕಲಚೇತನರಿಗೆ ವ್ಹೀಲ್‍ಚೇರ್, ವಾಕರ್ ಮತ್ತು ಶ್ರವಣ ಸಾಧನ ವಿತರಣಾ ಸಮಾರಂಭವನ್ನು ಇಂದು ಬೆಳಿಗ್ಗೆ 11 ಗಂಟೆಗೆ ಎಸ್.ಎಸ್. ಬಡಾವಣೆಯ `ಎ’ ಬ್ಲಾಕ್‍ನಲ್ಲಿರುವ ಜನಸಂಪರ್ಕ ಕಚೇರಿ, ಸಂ.2415/45, 10ನೇ ಅಡ್ಡ ರಸ್ತೆ, ಅಥಣಿ ಕಾಲೇಜು ರಸ್ತೆಯ ಕೊನೆಯ ಭಾಗದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಸದ್ಗುರು ಪರಮಹಂಸ ವಿದ್ಯಾವರೇಣ್ಯ ಮುರುಳೀಧರ ಸ್ವಾಮಿಗಳು ಹಾಗೂ ಯರಗುಂಟೆಯ ಶ್ರೀ ಪರಮೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ಇನ್‍ಸೈಟ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ವಿನಯ್‍ಕುಮಾರ್ ಜಿ.ಬಿ. ಕಕ್ಕರಗೊಳ್ಳ ಉಪಸ್ಥಿತರಿರುವರು.