ವಿಜನ್ ಇಂಟರ್ ನ್ಯಾಷನಲ್ ಸ್ಕೂಲ್ ಮಾನ್ಯತೆ ಹಿಂಪಡೆದ ಶಿಕ್ಷಣ ಇಲಾಖೆ

ದಾವಣಗೆರೆ, ಅ. 18 – ಎಂಪವರ್ ಎಜುಕೇಷನ್ ಆಶ್ರಯದಲ್ಲಿನ ವಿಜನ್ ಇಂಟರ್ ನ್ಯಾಷನಲ್ ಸ್ಕೂಲ್‌ನ ಮಾನ್ಯತೆಯನ್ನು ಹಿಂಪಡೆಯ ಲಾಗಿದೆ ಎಂದು  ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಈ ಶಾಲೆಯು ಇಲಾಖೆಯಿಂದ ಅನುಮತಿ ಪಡೆದ ಸ್ಥಳದಲ್ಲಿ ನಡೆಸದೇ ಅನಧಿಕೃತವಾಗಿ ಬೇರೆ ಸ್ಥಳದಲ್ಲಿ ನಡೆಸುತ್ತಿರುವ ಹಾಗೂ ಈ ಶಾಲೆಯ ಕಟ್ಟಡದ ಮೇಲೆ ವಿದ್ಯುತ್ ಹೈಟೆನ್ಷನ್ ತಂತಿ ಹಾದು ಹೋಗಿದ್ದು, ಹಾಗೂ ಮಹಾನಗರ ಪಾಲಿಕೆಯಿಂದ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯದೇ ಕಟ್ಟಡ ನಿರ್ಮಾಣ ಮಾಡಿರುವ ಹಿನ್ನೆಲೆಯಲ್ಲಿ ಈ ಶಾಲೆಯ ಮಾನ್ಯತೆಯನ್ನು ಹಿಂಪಡೆಯಲಾಗಿದೆ.  ವಿದ್ಯಾರ್ಥಿಗಳ ಪೋಷಕರು ಈ ಶಾಲೆಗೆ ದಾಖಲಾತಿ ಮಾಡದಂತೆ ಹಾಗೂ ಈಗಾಗಲೇ ದಾಖಲಾತಿ ಹೊಂದಿರುವ ಮಕ್ಕಳನ್ನು ಸಂಬಂಧಿಸಿದ ಪೋಷಕರು ಸಮೀಪದ ಅಧಿಕೃತ ಶಾಲೆಗೆ ದಾಖಲಾತಿ ಮಾಡುವಂತೆ ಅವರು ಪೋಷಕರಿಗೆ ಕರೆ ನೀಡಿದ್ದಾರೆ.

error: Content is protected !!