ಚನ್ನಗಿರಿ : 19ರಂದು ರೈತರ ಸಮಸ್ಯೆಗಳು, ಪರಿಹಾರಗಳು ಸಂವಾದ ಕಾರ್ಯಕ್ರಮ

ಚನ್ನಗಿರಿ, ಅ. 17- ಕೃಷಿ ಸವಾಲು ಮತ್ತು ಪರಿಹಾರಗಳಿಗೆ ತುಮಕೂರಿನ ಮಹಾತ್ಮ ಗಾಂಧಿ ಸಹಜ ಬೇಸಾಯ ಶಾಲೆಯ ಡಾ. ಮಂಜುನಾಥ್‌ ಅವರು  ನಾಡಿದ್ದು ದಿನಾಂಕ 19ರ ಗುರುವಾರ ಬೆಳಿಗ್ಗೆ 11 ಗಂಟೆಗೆ ತಾಲ್ಲೂಕಿನ ಪಾಂಡೋಮಟ್ಟಿ ವಿರಕ್ತಮಠದಲ್ಲಿ ರೈತರೊಡನೆ ಸಂವಾದ ನಡೆಸಲಿದ್ದಾರೆ.

ರೈತರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳು ಪರೋಕ್ಷವಾಗಿ ಮತ್ತು ನೇರವಾಗಿ ರೈತರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ನೀರು, ಬರಗಾಲ, ಬೆಲೆ ಏರಿಕೆಗಳಿಂದ ಹಣದ ಕೊರತೆ, ರೈತರ ಕಾಳು ಕಡಿ ಉತ್ಪಾದನಾ ವೆಚ್ಚಕ್ಕೆ ಸರಿಯಾದ ಬೆಲೆ ನಿಗದಿ ಇಲ್ಲದಿರುವುದು.ಕೆಲವೊಮ್ಮೆ ಅತೀ ಹೆಚ್ಚು ಮಳೆ, ಅತೀ ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳ ಬಳಕೆಯಿಂದ ಭೂಮಿಯ ಕ್ಷಾರ ಇತ್ಯಾದಿ ಇದ್ದೇ ಇವೆ. ಇಂತಹ ವಿಷಯಗಳಿಗೆ ಸಂವಾದ ನಡೆಯಲಿದ್ದು,  ಈ ಅತ್ಯುಪಯುಕ್ತ ಮಾಹಿತಿಗಳನ್ನು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡು ತಮ್ಮ ಕೃಷಿ ಜೀವನವನ್ನು ಆನಂದಭರಿತವಾಗಿ ಮಾಡಿಕೊಳ್ಳಲು ಆಗಮಿಸಬೇಕಾಗಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ, ಮಹಿಮಾ ಜೆ. ಪಟೇಲ್, ಕರುಣಾ ಜೀವ ಕಲ್ಯಾಣ ಟ್ರಸ್ಟಿನ ಉದಯ್ ಕುಮಾರ್, ಶಿವನಕೆರೆ ಬಸವಲಿಂಗಪ್ಪ ವಿನಂತಿಸಿದ್ದಾರೆ. 

error: Content is protected !!