ಮಗುವಿನೊಂದಿಗೆ ಸೂಳೆಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ

ಚನ್ನಗಿರಿ, ಅ.17- ಮಹಿಳೆಯೊಬ್ಬರು ತನ್ನ ಐದು ವರ್ಷದ ಮಗುವನ್ನು ವೇಲ್‌ಗೆ ಕಟ್ಟಿಕೊಂಡು ಸೂಳೆಕೆರೆಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ನಡೆದಿದೆ.

ತಾಲ್ಲೂಕಿನ ಹೊನ್ನೇಬಾಗಿ ಗ್ರಾಮದ ಮಂಜುನಾಥ್ ಅವರ ಪತ್ನಿ ಕವಿತಾ (27), ಪುತ್ರಿ ನಿಹಾರಿಕಾ (5) ಮೃತಪಟ್ಟವರು.

ಆರು ವರ್ಷಗಳ ಹಿಂದೆ ಹೊನ್ನೇಬಾಗಿ ಗ್ರಾಮದ ಮಂಜುನಾಥ್ ಅವರೊಂದಿಗೆ ಎರೇಹಳ್ಳಿ ಗ್ರಾಮದ ಕವಿತಾ ಅವರ ವಿವಾಹವಾಗಿತ್ತು. ಕವಿತಾ ಅವರು ಮಗುವಿನೊಂದಿಗೆ ಕಾಣೆಯಾಗಿರುವ ಬಗ್ಗೆ ಚನ್ನಗಿರಿ ಠಾಣೆಗೆ ಪತಿ ಮಂಜುನಾಥ್ ದೂರು ನೀಡಿದ್ದರು. ಸಾಕಷ್ಟು ಹುಡುಕಾಟದ ಬಳಿಕ ಸೂಳೆಕೆರೆಯಲ್ಲಿ ಕವಿತಾ ಮತ್ತು ನಿಹಾರಿಕಾ ಶವಗಳು ಪತ್ತೆಯಾಗಿದ್ದವು.

ವರದಕ್ಷಿಣೆ ಕಿರುಕುಳದಿಂದ ತಮ್ಮ ಮಗಳು ಮಗುವಿ ನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಂಜುನಾಥ್‌ನನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಕವಿತಾ ತವರು ಮನೆಯವರು ದೂರಿನಲ್ಲಿ ತಿಳಿಸಿದ್ದಾರೆ. ಎಸ್‌ಪಿ ಉಮಾ ಪ್ರಶಾಂತ್ ಹಾಗೂ ಡಿವೈಎಸ್‌ಪಿ ಪ್ರಶಾಂತ್ ಮನ್ನೊಳಿ ಅವರು ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

error: Content is protected !!