ಹರಪನಹಳ್ಳಿ, ಅ.12- ಸ್ವರ ವೈಭವ ಸಾಂಸ್ಕೃತಿಕ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಕನ್ನಡ ರಾಜೋತ್ಸವದ ಅಂಗವಾಗಿ ಇದೇ ದಿನಾಂಕ 22 ರಂದು ಪಟ್ಟಣದ ಕೆಂಪೇಶ್ವರ ದೇವಸ್ಥಾನ ಬಳಿಯಿರುವ ಟಿಎಂಎಇ ಪ್ರೌಢಶಾಲಾ ಆವರಣದಲ್ಲಿ ಕನ್ನಡ ಕೋಗಿಲೆ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸ್ಪರ್ಧೆಯ ಅಯೋಜಕ ಬಸವರಾಜ ಭಂಡಾರಿ ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ವಿಜಯನಗರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ ಜಿಲ್ಲೆಯ ಗಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾ ಗಿದೆ. ಕಲರ್ ಕನ್ನಡ ವಾಹಿನಿಯ ಕನ್ನಡ ಕೋಗಿಲೆ ವಿಜೇತ ಖಾಸಿಂ ಅಲಿ ಅವರು ಸ್ಪರ್ಧೆಯ ಗ್ರಾಂಡ್ ಫಿನಾಲೆ ತೀರ್ಪುಗಾರರಾಗಿ ಆಗಮಿಸಲಿದ್ದಾರೆ. ಇಲ್ಲಿ ವಿಜೇತ ರಾದವರಿಗೆ ಅ.29ರಂದು ಎರಡನೇ ಸುತ್ತಿನ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ.
22ರಂದು ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ
