ನಗರದ ದವನ್ ಕಾಲೇಜಿನಿಂದ ಇಂದು ಯುವಜನೋತ್ಸವ

ದಾವಣಗೆರೆ, ಅ. 12- ನಗರದ ಸ್ಫೂರ್ತಿ ಎಜುಕೇಶನ್ ಟ್ರಸ್ಟ್‌ನ ದವನ ಕಾಲೇಜಿನ ವತಿಯಿಂದ ಇನ್‌ಸ್ಪಿರೇಷನ್-2023 ಅಂತರ ಕಾಲೇಜು ಮಟ್ಟದ ಯುವಜನೋತ್ಸವ ಕಾರ್ಯ ಕ್ರಮ ನಾಳೆ ದಿನಾಂಕ 13 ರಂದು ಬೆಳಿಗ್ಗೆ 9.30 ಕ್ಕೆ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಕನ್ನಡ ಉಪನ್ಯಾಸಕ ಕೆ. ಕೊಟ್ರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಮ್, ಬೆಸ್ಟ್ ಎಂಟರ್‌ಟ್ರೈನ್‌ಮೆಂಟ್, ಮ್ಯಾಡ್‌ಅಡ್, ಡ್ಯಾನ್ಸ್, ಬ್ಯಾಟಲ್‌ ಫಿಯಾಸ್ಟಾ ಸ್ಪರ್ಧೆಗಳು ನಡೆಯಲಿವೆ. ಪ್ರತಿಯೊಂದು ಸ್ಪರ್ಧೆಗೆ 3333 ರೂ. ಪ್ರಥಮ, 2222 ರೂ. ದ್ವಿತೀಯ ಬಹುಮಾನ ಹಾಗೂ ಪಾರಿತೋಷಕ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ದಾವಣಗೆರೆ ವಿವಿ ಪರೀಕ್ಷಾಂಗ ಕುಲಸಚಿವ ಡಾ. ಕೆ. ಶಿವಶಂಕರ್ ಕಾರ್ಯಕ್ರಮ ಉದ್ಘಾಟಿಸು ವರು. ದವನ್ ಕಾಲೇಜು ಕಾರ್ಯದರ್ಶಿ ವೀರೇಶ್ ಪಟೇಲ್, ಜಂಟಿ ಕಾರ್ಯದರ್ಶಿ ಡಾ. ಜಿ.ಎಸ್. ಅಂಜು, ನಿರ್ದೇಶಕ ಹರ್ಷರಾಜ್ ಎ. ಗುಜ್ಜರ್ ಮತ್ತಿತರರು ಭಾಗವಹಿಸಲಿದ್ದಾರೆಂದರು.

ಸುದ್ದಿಗೋಷ್ಠಿಯಲ್ಲಿ ದವನ್ ಕಾಲೇಜಿನ ಉಪ ಪ್ರಾಂಶುಪಾಲರಾದ ಎನ್. ಅನಿತಾ, ಜೆ.ಹೆಚ್. ಧನಂಜಯ, ಎಸ್. ಮಿಥುನ್, ಆರ್. ಅಜೇಯ್, ಎಸ್. ಆರ್. ಶ್ರೇಯಾ ರೇವಣಕರ್, ಮಾನ್ಯ ಕೆ. ಇಟಗಿ ಉಪಸ್ಥಿತರಿದ್ದರು. 

error: Content is protected !!