ಹಳೆಕಡ್ಲೇಬಾಳ್‌ನಲ್ಲಿ 15 ರಿಂದ ಚಂಡಿಕಾ ಹೋಮ

ಹಳೆಕಡ್ಲೇಬಾಳ್‌ನಲ್ಲಿ  15 ರಿಂದ ಚಂಡಿಕಾ ಹೋಮ

ದಾವಣಗೆರೆ, ಅ. 12- ಹಳೆಕಡ್ಲೇಬಾಳು ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಇದೇ ದಿನಾಂಕ 15 ರಿಂದ 24ರವರೆಗೆ ಪ್ರತಿನಿತ್ಯ ಚಂಡಿಕಾ ಹೋಮ ನಡೆಯಲಿದೆ. 

ನವರಾತ್ರಿ ಪ್ರಯುಕ್ತ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿನಿತ್ಯ ಶ್ರೀ ನಾಗ ಸುಬ್ರಹ್ಮಣ್ಯ ಸ್ವಾಮಿಗೆ ಪ್ರತಿನಿತ್ಯ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಅಷ್ಟೋತ್ತರ ಪೂಜೆ, ಆಶ್ಲೇಷ ಬಲಿ ಪೂಜೆ, ಶ್ರೀ ಗಣಪತಿ ಹೋಮ,
ಸುಬ್ರಹ್ಮಣ್ಯ ಮೂಲ ಮಂತ್ರ, ಹೋಮ ಹಾಗೂ ಸ್ವಾಮಿಯ ಸೇವಾ ಮತ್ತು ಪ್ರಸಾದ ವಿತರಣೆ ನಡೆಯಲಿದೆ.

error: Content is protected !!