ನಗರದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ದಸರಾ ಮಹೋತ್ಸವ

ನಗರದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ  ದಸರಾ ಮಹೋತ್ಸವ

ದಾವಣಗೆರೆ, ಅ. 11- ಸ್ಥಳೀಯ ಕೆಟಿಜೆ ನಗರ, ಮೂರನೇ ಮುಖ್ಯರಸ್ತೆ, 11 ಮತ್ತು 12ನೇ ತಿರುವಿನಲ್ಲಿರುವ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ನಾಡಹಬ್ಬ ದಸರಾ ಮಹೋತ್ಸವವು ಇದೇ ದಿನಾಂಕ 15 ರ ಭಾನುವಾರ ಆರಂಭವಾಗಲಿದ್ದು, 9 ದಿನಗಳ ಕಾಲ ನಡೆಯಲಿದೆ.

ದಿ. 15ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಅಮ್ಮನ ವರ ಗಂಗಾಪೂಜೆ ಹರಿಹರದಲ್ಲಿ ಏರ್ಪಾಡಾಗಿದ್ದು, ಅದೇ ದಿನ ಸಂಜೆ 7 ಗಂಟೆಗೆ ಶ್ರೀದೇವಿ ಘಟಸ್ಥಾಪನೆ ಮತ್ತು ದೀಪ ಹಾಕುವ ಕಾರ್ಯಕ್ರಮ ಜರುಗಲಿದೆ.

ದಿ. 22ರ ಭಾನುವಾರ ಮುಂಜಾನೆ ದುರ್ಗಾಷ್ಟಮಿಯಂದು ಚಂಡಿಕಾ ಹೋಮ ಮತ್ತು ಅನ್ನ ಸಂತರ್ಪಣೆ ಆಯೋಜನೆಗೊಂಡಿದೆ.

ದಿ. 23ರ ಸೋಮವಾರ ಆಯುಧ ಪೂಜೆ, ದಿ. 24ರ ಮಂಗಳವಾರ ಸಂಜೆ 4.30ಕ್ಕೆ ಬನ್ನಿ ಮುಡಿಯುವುದು, ಅಂಬುಛೇದನ, ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ದಿನಾಂಕ 22ರ ಭಾನುವಾರ ಏರ್ಪಾಡಾಗಿರುವ ಚಂಡಿಕಾ ಹೋಮದಲ್ಲಿ ಭಾಗವಹಿಸಲಿಚ್ಛಿಸುವ ಭಕ್ತಾದಿಗಳು ದೇವಸ್ಥಾನದಲ್ಲಿ ಹೆಸರು ನೋಂದಾಯಿಸಬಹುದು.

error: Content is protected !!