ನಗರದೇವತೆ ದುಗ್ಗಮ್ಮನ ದೇವಸ್ಥಾನದಲ್ಲಿ 15ರಿಂದ ದಸರಾ ಉತ್ಸವ

ನಗರದೇವತೆ ದುಗ್ಗಮ್ಮನ ದೇವಸ್ಥಾನದಲ್ಲಿ 15ರಿಂದ ದಸರಾ ಉತ್ಸವ

15ರ ಮುಂಜಾನೆ ಎಸ್ಸೆಸ್-ಎಸ್ಸೆಸ್ಸೆಂ ಕುಟುಂಬದಿಂದ ನಾಡಹಬ್ಬಕ್ಕೆ ಚಾಲನೆ ; ಉತ್ಸವದ ಕೊನೆ ದಿನದಂದು ಉಚಿತ ಸಾಮೂಹಿಕ ವಿವಾಹ

ದಾವಣಗೆರೆ, ಅ. 11- ನಗರದ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಇದೇ ದಿನಾಂಕ 15 ರಿಂದ ದಿನಾಂಕ 24ರವರೆಗೆ 9 ದಿನಗಳ ಕಾಲ ನವರಾತ್ರಿ ಮಹೋತ್ಸವ ಆಯೋಜನೆಗೊಂಡಿದೆ.

ದಿ. 15ರ ಭಾನುವಾರ ಬೆಳಿಗ್ಗೆ 6.30ಕ್ಕೆ ದೇವಸ್ಥಾನದ ಪುರೋಹಿತರಾದ ನಾಗರಾಜ್ ಜೋಯಿಸ್ ಅವರ ಸಮ್ಮುಖದಲ್ಲಿ ಹಿರಿಯ ಶಾಸಕರೂ ಆಗಿರುವ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್‌ನ ಗೌರವಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರುಗಳು ದೀಪ ಬೆಳಗಿಸುವುದರ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡುವರು.

ನವರಾತ್ರಿ ಮಹೋತ್ಸವದ ಅಂಗವಾಗಿ ಇದೇ ದಿನಾಂಕ 15 ರಿಂದ 9 ದಿನಗಳ ಕಾಲ ಪ್ರತಿದಿನ ರಾತ್ರಿ 7.30 ರಿಂದ ದೇವಸ್ಥಾನದ ಪಾದಗಟ್ಟೆ ಹತ್ತಿರ ಶ್ರೀ ದೇವಿ ಪುರಾಣ – ಪ್ರವಚನ ಜರುಗಲಿದೆ. ಹಾವೇರಿ ಜಿಲ್ಲೆ ಹಾವನೂರು ತಾಲ್ಲೂಕಿನ ಕರಡಗಿ ಗ್ರಾಮದ ಹರಿಕಥಾ ವಿದ್ವಾನ್ ರೇವಣಸಿದ್ದಯ್ಯ ಶಾಸ್ತ್ರಿ ಮತ್ತು ಸಂಗಡಿಗರು ಪ್ರವಚನ ನಡೆಸಿಕೊಡುವರು.

ದಿನಾಂಕ 15ರ ಭಾನುವಾರ ಘಟಸ್ಥಾಪನೆ, ಶ್ರೀದೇವಿಗೆ ಹಂಸವಾಹನ ಅಲಂಕಾರ  ಮಾಡಲಾಗುತ್ತದೆ. ದಿ. 16ರ ಸೋಮವಾರ ಹಂಸವಾಹನ ಅಲಂಕಾರ, ದಿ. 17ರ ಮಂಗಳವಾರ ವೃಷಭ ವಾಹನ ಅಲಂಕಾರ, ದಿ. 18ರ ಬುಧವಾರ ಮಯೂರ ವಾಹನ ಅಲಂಕಾರ, ದಿ. 19ರ ಗುರುವಾರ ಗರುಡ ವಾಹನ ಅಲಂಕಾರ, 20ರ ಶುಕ್ರವಾರ ಸರಸ್ವತಿ ಅಲಂಕಾರ, ದಿ. 21ರ ಶನಿವಾರ ಕಾಳಿ ಅಲಂಕಾರ, ದಿ. 22ರ ಭಾನುವಾರ ದುರ್ಗಾಷ್ಟಮಿ, ದುರ್ಗಾ ಅಲಂಕಾರ, ದಿ. 23ರ ಸೋಮವಾರ ಸಿಂಹ ವಾಹನ ಅಲಂಕಾರ ಮಾಡಲಾಗುತ್ತದೆ.

ದಿ. 23ರ ಸೋಮವಾರ ಬೆಳಿಗ್ಗೆ 10.30ಕ್ಕೆ ಕುಂಭಾಭಿಷೇಕ, ದಿ. 24ರ ಮಂಗಳವಾರ ಗಜಲಕ್ಷ್ಮಿ ಅಲಂಕಾರ, ವಿಜಯದಶಮಿ (ಬನ್ನಿ ಮುಡಿಯುವುದು), ದಿ. 25ರ ಬುಧವಾರ ಕಳಸ ಪೂಜೆ, ಬೆಳಿಗ್ಗೆ 11.30ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

ದಿ. 25ರ ಬುಧವಾರ ಸದ್ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಾಡಾಗಿದ್ದು, ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರು ತಮ್ಮ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮನವರ ಜ್ಞಾಪಕಾರ್ಥವಾಗಿ ಅನ್ನ ಸಂತರ್ಪಣೆ ಸೇವೆ ಮಾಡಲಿದ್ದಾರೆ.

ದಿ. 25ರ ಬುಧವಾರ ಹಮ್ಮಿಕೊಂಡಿರುವ ಉಚಿತ ಸಾಮೂಹಿಕ ವಿವಾಹ ಮಹೋ ತ್ಸವದ ಸಾನ್ನಿಧ್ಯವನ್ನು ಆವರಗೊಳ್ಳ ಪುರವ ರ್ಗ ಮಠದ ಶ್ರೀ ಓಂಕಾರ ಶಿವಾ ಚಾರ್ಯ ಮಹಾಸ್ವಾಮೀಜಿ ವಹಿಸುವರು. ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಭಾಗವಹಿಸಲಿಚ್ಛಿ ಸುವವರು ಇದೇ ದಿ. 20ರೊಳಗೆ ದೇವ ಸ್ಥಾನದ ಕಛೇರಿಯಲ್ಲಿ ಹೆಸರು ನೋಂದಾಯಿ ಸಬಹುದು. ಸಾಮೂಹಿಕ ವಿವಾಹದಲ್ಲಿ 2 ಚಿನ್ನದ ತಾಳಿ, ಬೆಳ್ಳಿ ಕಾಲುಂಗರಕ್ಕೆ ಕೆಜಿಪಿ ಗೋಲ್ಡ್ ಪ್ಯಾಲೇಸ್‌ನ ಶ್ರೀಮತಿ ಸುರೇಖಾ ಗಣೇಶ್ ಡಿ. ಶೇಟ್ ಮತ್ತು ಎಂ.ಜಿ.ಎಸ್. ಜ್ಯುಯಲರ್ಸ್‌ನ ಶ್ರೀಮತಿ ಸವಿತಾ ಸುಬ್ರಹ್ಮಣ್ಯ ಡಿ. ಶೇಟ್ ದಾನಿಗಳಾಗಿದ್ದಾರೆ.

9 ದಿನಗಳ ದಸರಾ ಮಹೋತ್ಸವಕ್ಕೆ ಬೇಕಾಗುವ ವೀಳ್ಯದೆಲೆ ಸೇವೆಯನ್ನು ಗೌಡ್ರು ರಾಮಚಂದ್ರಪ್ಪ ಮತ್ತು ಸಹೋದರರು ಹಾಗೂ ಹೂವಿನ ಸೇವೆಯನ್ನು ಹೂವಿನ ವ್ಯಾಪಾರಿ ಬಿ. ರಾಮರೆಡ್ಡಿ ಮತ್ತು ಸಂಗಡಿಗರು ಮಾಡಿದ್ದಾರೆ.

ದಿ. 23ರ ಸೋಮವಾರ ನಡೆಯಲಿರುವ ಕುಂಭಾಭಿಷೇಕದಲ್ಲಿ ಭಾಗವಹಿಸಲಿಚ್ಛಿ ಸುವ ವರು ದೇವಸ್ಥಾನದಲ್ಲಿ ಹೆಸರು ನೋಂದಾಯಿಸ ಬಹುದು ಎಂದು ದೇವಸ್ಥಾನ ಟ್ರಸ್ಟ್ ಧರ್ಮ ದರ್ಶಿ ಗೌಡ್ರು ಚನ್ನಬಸಪ್ಪ ತಿಳಿಸಿದ್ದಾರೆ.

error: Content is protected !!