ಪಟಾಕಿಯಂತೆ `ಡಿಜೆ’ ನಿಷೇಧಿಸಬೇಕು ರವೀಂದ್ರಗೌಡ ಪಾಟೀಲ ಒತ್ತಾಯ

ರಾಣೇಬೆನ್ನೂರು, ಅ.11- ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ  ಪಟಾಕಿ ನಿಷೇದವನ್ನು ತಡಮಾಡಿಯಾದರೂ  ಮುಖ್ಯಮಂತ್ರಿ ಸಿದ್ದರಾಮಯ್ಯ  ಸುಪ್ರಿಂ ಕೋರ್ಟಿನ ಆದೇಶವನ್ನು ಪಾಲಿಸಲು ಮುಂದಾಗಿರುವುದು ನಿಟ್ಟುಸಿರು ಬಿಡುವಂತಾಗಿದೆ ಎಂದು ರೈತ ಮುಖಂಡ   ರವೀಂದ್ರಗೌಡ ಎಫ್. ಪಾಟೀಲ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ರವೀಂದ್ರಗೌಡ, ಇತ್ತೀಚಿನ ದಿನಗಳಲ್ಲಿ ಪಟಾಕಿ ಸಿಡಿಸುವ ಭರದಲ್ಲಿ ಆಗುತ್ತಿರುವ ಅನಾಹುತ, ಪಟಾಕಿ ಕಂಪನಿ, ಗೋದಾಮುಗಳಲ್ಲಿ ಸಂಭವಿಸುವ ಜೀವ ಹಾನಿಯಾಗುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೊನ್ನೆ ಬೆಂಗಳೂರಿನ ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತದಿಂದ ಅಮಾಯಕ 14 ಮಂದಿ ಸಜೀವ ದಹನವಾಗಿದ್ದು, ಇದರಿಂದ ಇಡೀ ದೇಶವೇ ತಲ್ಲಣಗೊಂಡಿದೆ. ಇನ್ನು ದೀಪಾವಳಿ, ಗಣೇಶೋತ್ಸವ ಮುಂತಾದ ಹಬ್ಬ, ಹರಿದಿನಗಳಲ್ಲಿ ಪ್ರತಿ ಬಾರಿ ನೂರಾರು ಮುಗ್ದ ಮಕ್ಕಳು ಅನಾಹುತ ಮಾಡಿಕೊಳ್ಳುತ್ತಿದ್ದಾರೆ.       

ಪಟಾಕಿ ನಿಷೇಧದಂತೆ ಮನುಕುಲಕ್ಕೆ ಮಾರಕವಾಗಿರುವ, ಸಾಮಾಜದ ಸ್ವಾಸ್ಥ್ಯತೆ ಹದಗೆಡಿಸುವ ಭವ್ಯ ಭಾರತದ ಶ್ರೀಮಂತ ಸಂಸ್ಕೃತಿಯನ್ನೇ ಹಾಳು ಮಾಡುತ್ತಿರುವ ಮತ್ತು ಹೃದಯ ಬೇನೆಯಿಂದ ಬಳಲುತ್ತಿರುವವರ ಹಾಗೂ ‘ಹಾಟ್ ವೀಕ್’ ಇರುವ ಅಮಾಯಕ ರೋಗಿಗಳ, ಹಸುಗೂಸುಗಳ, ಗರ್ಭಿಣಿಯರಿಗೆ ಸಾಕಷ್ಟು ಕಿರಿ ಕಿರಿ, ತೊಂದರೆ, ಮೆರವಣಿಗೆ ಸಂದರ್ಭದಲ್ಲಿ ಎಷ್ಟೋ ಅಮಾಯಕರು ಪ್ರಾಣ ತೆಗೆಯುತ್ತಿರುವ ಈ ಡಿ.ಜೆ.ಯನ್ನೂ ಕೂಡಾ ಶಾಶ್ವತವಾಗಿ  ನಿಷೇಧಿಸಬೇಕೆಂದು ಅವರು ಸಿ.ಎಂ. ಸಿದ್ದರಾಮಯ್ಯ, ಡಿ.ಸಿ.ಎಂ. ಡಿ.ಕೆ. ಶಿವಕುಮಾರ್‌ರವರಿಗೆ ಬರೆದ ಪತ್ರದಲ್ಲಿ  ಒತ್ತಾಯಿಸಿದ್ದಾರೆ.

error: Content is protected !!