`ಸತ್ಯಮೇವ ಜಯತೆ’ ಎನ್ನುವ ಸೂಕ್ತಿ ಕನ್ನಡದಲ್ಲಿರಬೇಕು: ಸುಭಾನ್

ದಾವಣಗೆರೆ, ಅ.10- ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಮಾಡಿ 50 ವರ್ಷ ಪೂರ್ಣಗೊಳ್ಳಲಿದ್ದು, ಇದರ ಅಂಗವಾಗಿ `ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಶೀರ್ಷಿಕೆಯಡಿ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟವಾದ ಲಾಂಚನ ಮಾದರಿಯನ್ನು  ಸರ್ಕಾರ ಆಹ್ವಾನಿಸಿದೆ. ಇದು ಸ್ವಾಗತಾರ್ಹವಾಗಿದೆ ಎಂದು  ಹೆಲ್ಪ್ ಲೈನ್ ಸುಭಾನ್ ತಿಳಿಸಿದ್ದಾರೆ.

ಆದರೆ ಕರ್ನಾಟಕ ಸರ್ಕಾರದ ಲಾಂಚನದಲ್ಲಿ `ಸತ್ಯಮೇವ ಜಯತೆ’ ಎನ್ನುವ ಸೂಕ್ತಿಯು ಕನ್ನಡೇತರ ಭಾಷೆಯಲ್ಲಿ ಮುದ್ರಿತವಾಗಿದೆ. ಇದನ್ನು ಮೊದಲು ಸರಿಪಡಿಸಬೇಕಾಗಿದೆ. ಇದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಬುದ್ದಿ ಜೀವಿಗಳು, ಕನ್ನಡಪರ ಹೋರಾಟಗಾರರು, ಸಾಹಿತಿಗಳು ಮತ್ತು ಇತಿಹಾಸಕಾರರನ್ನು ಒಳಗೊಂಡ ಸರ್ಕಾರಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕೆಂದು  ಸುಭಾನ್ ಒತ್ತಾಯಿಸಿದ್ದಾರೆ.

error: Content is protected !!