ದಾವಣಗೆರೆ ಯುವಕರು ರೂಪಿಸಿದ `ಭಾರತೀಯ ಕ್ರಿಕೆಟ್ ಗೀತೆ’

ದಾವಣಗೆರೆ, ಅ.10-  ಬ್ಲಾಕ್ ಕ್ಯಾಟ್ಸ್ ಕ್ರಿಯೇಟಿವ್ ಲ್ಯಾಬ್ ವತಿಯಿಂದ `ಭಾರತೀಯ ಕ್ರಿಕೆಟ್ ಗೀತೆ (ವರ್ಡ್ ಕಪ್ ಕ್ರಿಕೆಟ್ ಆಂಥೆಮ್-2023) ರೂಪಿಸಲಾಗಿದೆ ಎಂದು ಕಾರ್ಯಕಾರಿ ನಿರ್ಮಾಪಕ ಚೇತನ್ ಎಂ.ಎಸ್.  ಹೇಳಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ವರ್ಲ್ಡ್‌ ಕಪ್ ಕ್ರಿಕೆಟ್ ಗೆದ್ದುಬರಲಿ ಎಂದು ಭಾರತ ತಂಡವನ್ನು ಹುರಿದುಂಬಿಸಲು ಈ ಕ್ರಿಕೆಟ್ ಗೀತೆ ರೂಪಿಸಲಾಗಿದೆ. 

ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿ ಇದೇ ಪ್ರಥಮ ಬಾರಿಗೆ 5 ಭಾಷೆಗಳಲ್ಲಿ ಬಿಡುಗಡೆಯಾಗಿದೆ ಎಂದು ಹೇಳಿದರು.

ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಗೀತೆಯಲ್ಲಿ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 3 ದಿನಗಳ ಕಾಲ ದಾವಣಗೆರೆಯಲ್ಲಿ ಶೂಟಿಂಗ್ ನಡೆಸಲಾಗಿದೆ ಎಂದರು.

ವಿಡಿಯೋ ಹಾಡನ್ನು ಬ್ಲ್ಯಾಕ್ ಕ್ಯಾಟ್ಸ್ ಕ್ರಿಯೇಟಿವ್ ಲ್ಯಾಬ್ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಡಿ.ಶೇಷಾಚಲ, ಅಮಿತ್ ಎನ್. ಪಾಟೀಲ್, ಬಾಲಾಜಿ, ಕಾರ್ತಿಕ್, ನವೀನ್ ಇತರರಿದ್ದರು.

error: Content is protected !!