ಗ್ರಾಮೀಣ ನಿರುದ್ಯೋಗಿಗಳಿಗೆ ತರಬೇತಿ

ದಾವಣಗೆರೆ, ಅ.10- ಗ್ರಾಮಾಂತರ ಕೈಗಾರಿಕಾ ವಿಭಾಗೀಯ ಕಚೇರಿಯ ಜಿಲ್ಲಾ ಉದ್ಯಮ ಕೇಂದ್ರ ಕಾರ್ಯಕ್ರಮದಡಿ ಗ್ರಾಮೀಣ ಪ್ರದೇಶದ ವಿದ್ಯಾವಂತ ನಿರುದ್ಯೋಗಿಗಳಿಗೆ ಕೌಶಲ್ಯಾಭಿವೃದ್ದಿ ಇಲಾಖೆಯ ಅನುಮೋದಿತ ತರಬೇತಿ ಸಂಸ್ಥೆಗಳ ಮೂಲಕ ನಿಗದಿತ ಅವಧಿಗೆ ಉಚಿತ ತರಬೇತಿ ನಡೆಯಲಿದೆ.

ವಿವರ: ಆರ್ಕ್ ಮತ್ತು ಗ್ಯಾಸ್ ವೆಲ್ಡಿಂಗ್, ಮೋಟಾರ್ ರೀವೈಡಿಂಗ್, ಬ್ಯೂಟಿ ಥೆರಫಿಸ್ಟ್, ಫೀಲ್ಡ್ ಟೆಕ್ನೀಷಿಯನ್ ಅಂಡ್ ಕಂಪ್ಯೂಟಿಂಗ್ ಪೆರಿಫೆರಲ್ಸ್, ಡೊಮೆಸ್ಟಿಕ್ ಎಲೆಕ್ಟ್ರೀಷಿಯನ್ ಮತ್ತು ಹೌಸ್ ವೈರಿಂಗ್, ಟಿ.ವಿ ರಿಪೇರಿ.

ಆಸಕ್ತ ನಿರುದ್ಯೋಗಿಗಳು ತಮ್ಮ ಗ್ರಾಮ ಪಂಚಾಯಿತಿ ಅಥವಾ ಉಪನಿರ್ದೇಶಕರ ಕಚೇರಿ (ಖಾ.ಗ್ರಾ), ಗ್ರಾಮೀಣ ಕೈಗಾರಿಕಾ ವಿಭಾಗ, ಪ್ಲಾಟ್ ನಂ.76(ಪಿ1), ಕರೂರು ಕೈಗಾರಿಕಾ ಪ್ರದೇಶ, ಪಿ.ಬಿ.ರಸ್ತೆ, ದಾವಣಗೆರೆ ಕಚೇರಿಯಿಂದ ಅರ್ಜಿಯನ್ನು ಪಡೆದು ಇದೇ ದಿನಾಂಕ 21 ರೊಳಗೆ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9448929717 ನ್ನು ಸಂಪರ್ಕಿಸಲು ಗ್ರಾಮಾಂತರ ಕೈಗಾರಿಕಾ ವಿಭಾಗದ ಉಪನಿರ್ದೇಶಕ ಸುರೇಶ್.ಹೆಚ್ ತಿಳಿಸಿದ್ದಾರೆ.

error: Content is protected !!