ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ.ಅಂಬೇಡ್ಕರ್ ದೀಕ್ಷಾಭೂಮಿಗೆ ತೆರಳಲು ಅರ್ಜಿ ಆಹ್ವಾನ

ದಾವಣಗೆರೆ, ಅ. 8 – ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾಭೂಮಿ ಯಾತ್ರೆಗೆ ತೆರಳಲು ಡಾ.ಬಿ.ಆರ್ ಅಂಬೇಡ್ಕರ್ ಅನುಯಾಯಿ ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿದಾರರು ನಾಡಿದ್ದು ದಿನಾಂಕ 10 ರೊಳಗಾಗಿ ವೆಬ್‍ಸೈಟ್  HYPERLINK ihttps://sw.kar.nic.in/i \t i_blanki https://sw.kar.nic.in  ನಲ್ಲಿ ನೋಂದಣಿ ಮಾಡಿಕೊಂಡು ಸ್ವೀಕೃತಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಲು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ. ನಾಗರಾಜ ತಿಳಿಸಿದ್ದಾರೆ.

error: Content is protected !!