ಸಿ.ಜಿ.ಕೆ ಪ್ರಶಸ್ತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾ ರಂಭ ಇಂದು ಮಧ್ಯಾಹ್ನ 3 ಗಂಟೆಗೆ ಕುವೆಂಪು ಕನ್ನಡ ಭವನದಲ್ಲಿ ನಡೆಯುವುದು. ಕರ್ನಾಟಕ ರಂಗ ಪರಿಷತ್ (ಬೆಂಗಳೂರು), ಶ್ರೀ ಸ್ವಾಮಿ ವಿವೇಕಾ ನಂದ ಸಾಂಸ್ಕೃತಿಕ ವೇದಿಕೆ (ದಾವಣಗೆರೆ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ದಾವಣಗೆರೆ) ಇವರುಗಳ ಸಹಯೋಗ ದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಾನ್ನಿಧ್ಯವನ್ನು ಪಾಂಡೋಮಟ್ಟಿ ಕಮ್ಮತ್ತಹಳ್ಳಿ ವಿರಕ್ತಮಠದ ಶ್ರೀ ಡಾ. ಗುರುಬಸವ ಮಹಾಸ್ವಾಮೀಜಿ ವಹಿಸುವ ರು. ಇನ್ಸ್‌ಸೈಟ್ ಐಎಎಸ್ ಸಂಸ್ಥಾಪಕ ವಿನಯ್‌ಕುಮಾರ್ ಜಿ.ಬಿ. ಕಾರ್ಯಕ್ರಮ ಉದ್ಘಾಟಿಸುವರು. ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಹೆಚ್. ದೇವರಾಜು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರವಿಚಂದ್ರ, ಬಿ. ವಾಮದೇವಪ್ಪ, ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ, ಹೆಚ್.ಕೆ. ಲಿಂಗರಾಜು, ಹೆಚ್.ಎಸ್. ಮಲ್ಲಿಕಾರ್ಜುನಪ್ಪ ಆಗಮಿಸುವರು.
ಕಾರ್ಯಕ್ರಮದಲ್ಲಿ ಶ್ರೀಮತಿ ಹೆಚ್.ಕೆ. ಸತ್ಯಭಾಮ ಮಂಜುನಾಥ್ ಅವರಿಗೆ ಸಿ.ಜಿ.ಕೆ ಪ್ರಶಸ್ತಿ ಪ್ರದಾನ ಮಾಡಲಾ ಗುವುದು. ಹೆಚ್.ಎನ್. ಶಿವಕುಮಾರ್ ಅವರ `ತಂತು ನಾನೇನ’ ಕಾದಂಬರಿ ಲೋಕಾರ್ಪಣೆ ನಡೆಯುವುದು.