ದಾವಣಗೆರೆ, ಅ. 6- ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯವು ಸಿದ್ಧಪಡಿಸಿದ ಜಾಗತಿಕ ಮಟ್ಟದ ಶ್ರೇಷ್ಠ ವಿಜ್ಞಾನಿಗಳ (2%) ಪಟ್ಟಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ನಾಲ್ವರು ಪ್ರಾಧ್ಯಾಪಕರು ಮತ್ತು ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಗಣಿತಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಬಿ.ಸಿ. ಪ್ರಸನ್ನಕುಮಾರ, ಪ್ರೊ.ಪ್ರಕಾಶ್, ಪ್ರೊ.ಯು.ಎಸ್.ಮಹಾಬಲೇಶ್ವರ ಮತ್ತು ಸಂಶೋಧನಾ ವಿದ್ಯಾರ್ಥಿಗಳಾಗಿದ್ದ ಡಾ. ಆರ್.ಜೆ.ಪುನೀತ್ ಗೌಡ, ಆರ್. ನವೀನಕುಮಾರ, ಜೆ.ಕೆ.ಮಧುಕೇಶ್, ಆರ್.ಎಸ್.ವರುಣಕುಮಾರ್ ಹಾಗೂ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಗೋವಿಂದಪ್ಪ ಅವರು ಶ್ರೇಯಾಂಕ ಪಟ್ಟಿಯಲ್ಲಿ ಸೇರಿದ್ದಾರೆ.
ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ದಾವಿವಿ ನಾಲ್ವರು ಪ್ರಾಧ್ಯಾಪಕರು
