ರಾಣೇಬೆನ್ನೂರು, ಅ.6- ಕ್ರೀಡಾ ಇಲಾಖೆಯಿಂದ ಮಾನ್ಯತೆ ಪಡೆಯದ ತೀರ್ಪುಗಾರರನ್ನು ನೇಮಿಸಿಕೊಂಡು ಜಿಲ್ಲಾ ಮಟ್ಟದ ಶಾಲಾ-ಕಾಲೇಜು ಕರಾಟೆ ಸ್ಪರ್ಧೆ ಗಳನ್ನು ನಡೆಸು ತ್ತಿದ್ದು, ಅದನ್ನು ಪ್ರತಿಭಟಿಸು ತ್ತಿರುವುದಾಗಿ ಹಾವೇರಿ ಜಿಲ್ಲಾ ಕರಾಟೆ ಅಸೋಸಿಯೇಷನ್ ತಿಳಿಸಿದೆ. ತರಬೇತಿ ಹೊಂದಿ, ರಾಜ್ಯ ಕರಾಟೆ ಸಂಸ್ಥೆಯ ಮನ್ನಣೆ ಪಡೆದ ನಮ್ಮ ಸಂಸ್ಥೆಯ ತೀರ್ಪುಗಾರರನ್ನು ಕರೆಯದೇ, ಅನಧಿಕೃತ ತೀರ್ಪುಗಾರರನ್ನು ನೇಮಿಸಿಕೊಂಡಿರುವ ಕಾರಣ ನಮಗೆ ಅನ್ಯಾಯವಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳೂ ಸೇರಿದಂತೆ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಅದನ್ನು ನಿರ್ಲಕ್ಷಿಸಿ ಇಂದು ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಸಂಸ್ಥೆಯವರು ವಿವರಿಸಿದ್ದಾರೆ.
ಪ್ರವಾಸಿ ಮಂದಿರದಲ್ಲಿ ನಡೆಸಿದ ಗೋಷ್ಠಿಯಲ್ಲಿ ಡಿಳ್ಳೆಪ್ಪ ಅನಿಂಗೇರ, ಮನೀಷಾ ಕಬ್ಬೂರ, ಸಮೀರ ಬಳ್ಳಾರಿ, ನಾಗರಾಜ ಸುಣಗಾರ, ದಾವಲ್ ಮಲ್ಲಿಕ ಮತ್ತಿತರರಿದ್ದರು.