ಹರಿಹರ, ಅ.4- ಹರಿಹರದ ಪ್ರೊ.ಬಿ. ಕೃಷ್ಣಪ್ಪ ಸ್ಮಾರಕದ ಬಳಿ ಮೊಬೈಲ್ ಸುಲಿಗೆ ಮಾಡಿರುವ ಕುರಿತು ದಾಖಲಾಗಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಹರಿಹರದ ಪ್ರವೀಣ್, ಬನ್ನಿಕೋಡು ಗ್ರಾಮದ ಅನಿಲ್ ಕುಮಾರ್ ಬಂಧಿತರು. ಇವರಿಂದ ಕೃತ್ಯಕ್ಕೆ ಬಳಸಿದ ಬೈಕ್, ಕಿತ್ತುಕೊಂಡು ಹೋಗಿದ್ದ ಮೊಬೈಲ್ ವಶ ಪಡಿಸಿಕೊಳ್ಳಲಾಗಿದೆ.
ಆರೋಪಿ ಪತ್ತೆಯಲ್ಲಿ ಹರಿಹರ ಗ್ರಾಮಾಂತರ ಪಿಎಸ್‌ಐಗಳಾದ ಅರವಿಂದ ಬಿ.ಎಸ್, ಅಬ್ದುಲ್ ಖಾದರ್ ಜಿಲಾನಿ, ಎಎಸ್‌ಐ ರಾಮಚಂದ್ರಪ್ಪ ಹಾಗೂ ಸಿಬ್ಬಂದಿಗಳಾದ ನಾಗರಾಜ್, ರಮೇಶ್ ಎನ್., ಬಣಕಾರ ಶ್ರೀಧರ, ಅನಿಲ್ ನಾಯ್ಕ, ಶೇಖರಪ್ಪ, ಹನುಮಂತ, ಶ್ರೀಮತಿ ಸುಶೀಲ ಶ್ರಮಿಸಿದ್ದರು.