ಹಳ್ಳೂರಿನಲ್ಲಿ ಇಂದು ಕೃತಿಗಳ ಲೋಕಾರ್ಪಣೆ

ದಾವಣಗೆರೆ, ಸೆ. 29- ಶ್ರೀ ಲಕ್ಷ್ಮೀರಂಗನಾಥ ದೇವಾಲಯ ಟ್ರಸ್ಟ್ ಕಮಿಟಿ ಹಳ್ಳೂರು, ಶಾಲಾ ಶಿಕ್ಷಣ ಇಲಾಖೆ ಹೊನ್ನಾಳಿ, ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು, ಕರ್ನಾಟಕ ರಾಜ್ಯ ವಿವಿ ಮತ್ತು ಪದವಿ ಕಾಲೇಜುಗಳ ನಿವೃತ್ತ ಪ್ರಾಧ್ಯಾಪಕರ ಸಂಘ, ಕಡೆಮನೆ ಪ್ರಕಾಶನ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ನಾಳೆ ದಿನಾಂಕ 30 ರ ಶನಿವಾರ ಬೆಳಿಗ್ಗೆ 11 ಗಂಟೆಗೆ ರಟ್ಟಿಹಳ್ಳಿ ತಾಲ್ಲೂಕು ಹಳ್ಳೂರಿನ ಹಳ್ಳೂರು ಶ್ರೀ ಲಕ್ಷ್ಮಿರಂಗನಾಥ ದೇವಾಲಯದ ಆವರಣದಲ್ಲಿ ಕೃತಿಗಳ ಲೋಕಾರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಹೆಚ್.ಜಿ. ಕೃಷ್ಣಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಳ್ಳೂರು ಶ್ರೀ ಲಕ್ಷ್ಮೀ ರಂಗನಾಥ ಟ್ರಸ್ಟ್ ಅಧ್ಯಕ್ಷ ಬಸವರಾಜಪ್ಪ ಮಹದೇವಪ್ಪ ಮೆಣಶಿನಕಾಯಿ ಅಧ್ಯಕ್ಷತೆ ವಹಿಸುವರು. ಹಿರೇಕೆರೂರು ಶಾಸಕ ಯು.ಬಿ. ಬಣಕಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

`ತುಂಗಭದ್ರಾ ಕಣಿವೆಯ ಹಳ್ಳೂರು ಚರಿತ್ರೆಯಲ್ಲಿ ಶ್ರೀ ಲಕ್ಷ್ಮೀರಂಗನಾಥ ದೇವಾಲಯ’ ಕುರಿತ ಪುಸ್ತಕವನ್ನು ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಹಾಗೂ `ಮರೆತು ಹೋದ ಹಳ್ಳೂರು ದಕ್ಷಿಣ ಭಾರತದ ದುರಂತ ಇತಿಹಾಸಕ್ಕೆ ಸಾಕ್ಷಿಯೇ?’ ಕುರಿತ ಪುಸ್ತಕವನ್ನು ಶಾಸಕ ಡಿ.ಜಿ. ಶಾಂತನಗೌಡ ಲೋಕಾರ್ಪಣೆಗೊಳಿಸಲಿದ್ದಾರೆ.

ಐತಿಹಾಸಿಕ ಪರಂಪರೆ ಕುರಿತು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರ ಕೊಂಡಾರೆಡ್ಡಿ ಮಾತನಾಡುವರು. ಎರಡು ಪುಸ್ತಕಗಳ ಕುರಿತು ಮೈಸೂರಿನ ವಿಶ್ರಾಂತ ಪ್ರಾಚಾರ್ಯ ಪ್ರೊ.ಎಸ್.ಶಿವಾಜಿ ಜೋಯಿಸ್, ತುಮಕೂರು ವಿಶ್ರಾಂತ ಪ್ರಾಚಾರ್ಯ ಪ್ರೊ.ಎಂ.ಹೆಚ್. ನಾಗರಾಜ್ ಮಾತನಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ನರಸಗೊಂಡನಹಳ್ಳಿ ಸಮಾಜ ಸೇವಕ ಡಾ.ಎನ್.ಹೆಚ್. ಹಾಲಪ್ಪ, ಹೊನ್ನಾಳಿ ವೈದ್ಯರಾದ ಡಾ. ರಾಜಕುಮಾರ್, ಹೊನ್ನಾಳಿ ಬಿಇಓ ಎಸ್.ಸಿ. ನಾಗೇಂದ್ರಪ್ಪ, ಭದ್ರಾವತಿ ಬಿಇಓ ಎ.ಕೆ. ನಾಗೇಂದ್ರಪ್ಪ, ಹೊನ್ನಾಳಿ ಇತಿಹಾಸ ತಜ್ಞ ಡಾ. ನಾ. ಕೊಟ್ರೇಶ್ ಉತ್ತಂಗಿ, ತುಮಕೂರು ವಿದ್ಯೋದಯ ಶಿಕ್ಷಣ ಸಂಸ್ಥೆಗಳ ಸಿಇಓ ಪ್ರೊ.ಕೆ. ಚಂದ್ರಣ್ಣ, ಸಿರಾ ಇತಿಹಾಸ ಸಂಶೋಧಕ ಡಾ.ಎನ್. ನಂದೀಶ್ವರ, ಸ್ಕ್ಯಾನ್ ಪ್ರಿಂಟರ್‌ ಕೃಷ್ಣಮೂರ್ತಿ ಮತ್ತಿತರರು ಭಾಗವಹಿಸಲಿದ್ದಾರೆ.

error: Content is protected !!