ಹರಿಹರದಲ್ಲಿ ಮನೆಗಳ್ಳತನ : ನಾಲ್ವರ ಬಂಧನ 8.16 ಲಕ್ಷ ರೂ. ಮೌಲ್ಯದ ಸ್ವತ್ತು ವಶ

ಸಾರ್ವಜನಿಕರು ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡು ಬೇರೆ ಬೇರೆ ಊರುಗಳಿಗೆ ಹೋಗುವಾಗ ಮನೆಯಲ್ಲಿ, ಬೆಲೆಬಾಳುವ ವಸ್ತುಗಳನ್ನು ಬಿಟ್ಟು ಹೋಗಬಾರದು ಹಾಗೂ ಬೀಗ ಹಾಕಿಕೊಂಡು ಹೋಗುವ ಬಗ್ಗೆ ಮುಂಚಿತವಾಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಲ್ಲಿ ನಿಮ್ಮ ಮನೆಗಳ ಕಡೆಗೆ ಹೆಚ್ಚಿನ ಗಸ್ತು ಕರ್ತವ್ಯ ನಿರ್ವಹಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ದಾವಣಗೆರೆ, ಜು. 28- ಹರಿಹರ ನಗರದ ಕೇಶವ ನಗರ ಪಟೇಲ್ ಬಡಾವಣೆಯಲ್ಲಿ ಮನೆ ಕಳ್ಳತನ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, 8.16 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಳಗಾವಿ ಜಿಲ್ಲೆಯ ಸುರೇಶ್‌ ಶಿಂಗ್ರೂರ್ (27), ದುರುಗಪ್ಪ ಕುಂಚಿಕೊರವರ, ಧಾರವಾಡ ಜಿಲ್ಲೆಯ ನಾಗಪ್ಪ (41) ಕೊಲ್ಲಾಪುರದ ಸಂತೋಷ್ ಪವಾರ (28) ಬಂಧಿತರು.

ಬಂಧಿತರಿಂದ ಹರಿಹರ ನಗರ ಪೊಲೀಸ್‌ ಠಾಣೆಯ ಒಂದು ಪ್ರಕರಣ ಹಾಗೂ ಗದಗ್ ಶಹರ ಪೊಲೀಸ್ ಠಾಣೆಯ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ 7.80 ಲಕ್ಷ ರೂ. ಬೆಲೆಯ 130 ಗ್ರಾಂ ಬಂಗಾರದ ಆಭರಣ, 31500 ರೂ. ಬೆಲೆಯ 435 ಗ್ರಾಂ ಬೆಳ್ಳಿ ಆಭರಣ ಹಾಗೂ 5 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಪಿಎಸ್‌ಐಗಳಾದ  ಪ್ರವೀಣ ಕುಮಾರ್, ಚಿದಾನಂದಪ್ಪ ಎಸ್.ಬಿ., ಮಂಜುನಾಥ ಕಲ್ಲೆದೇವರ ಪುರ ಹಾಗೂ ಸಿಬ್ಬಂದಿಗಳಾದ ಮಂಜುನಾಥ ಬಿ.ವಿ,  ದೇವರಾಜ್ ಸುರ್ವೆ,  ಮಂಜುನಾಥ ಕಾತಮ್ಮನವರ,  ಹನುಮಂತ ಗೋಪನಾಳ, ಮುರುಗೇಶ್, ಸಿದ್ಧರಾಜು, ರಾಘವೇಂದ್ರ, ಶಾಂತರಾಜ್, ನಾಗರಾಜ ಕುಂಬಾರ, ಅಕ್ತರ್,  ವೀರೇಶ, ಅಡಿವೆಪ್ಪನವರ್‌ ಮಾರುತಿ ಇವರುಗಳನ್ನೊಳಗೊಂಡ ತಂಡವು ಆರೋಪಿತರ  ಪತ್ತೆಯಲ್ಲಿ ಯಶಸ್ವಿಯಾಗಿದೆ. ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ಪ್ರಶಂಸಿಸಿದ್ದಾರೆ.

error: Content is protected !!