ಕೆಟಿಜೆ ನಗರ 2 ನೇ ಕ್ರಾಸ್‌ನಲ್ಲಿನ ಶ್ರೀ ಮಹಾಗಣಪತಿ, ಶ್ರೀ ಶನೈಶ್ಚರ, ಶ್ರೀ ದುರ್ಗಾದೇವಿ ದೇವಸ್ಥಾನ ಸಮಿತಿ ವತಿಯಿಂದ 46 ನೇ ವರ್ಷದ ಗಣೇಶ ಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ 9.30 ರಿಂದ ಕೆಟಿಜೆ ನಗರ 1 ನೇ ತಿರುವಿನಲ್ಲಿ ಕುಲ ದೇವರ ಮರಗಳಾದ
ಅರಳಿ (ಅಶ್ವತ್ಥ್), ಬನ್ನಿ (ಶಮೀ) ಮತ್ತು ಬೇವಿನ ಮರಗಳಿಗೆ ಪುರೋಹಿತರಾದ ವಿಲಾಸ್ ಭಟ್ ಮತ್ತು ವೃಂದದವರು ದೀಕ್ಷೆ ನೆರವೇರಿಸಿಕೊಡಲಿದ್ದಾರೆ.
ಗಣ ಹೋಮದ ನಂತರ ಮಧ್ಯಾಹ್ನ 12.30 ಕ್ಕೆ ಅನ್ನ ಸಂತರ್ಪಣೆ, ಸಂಜೆ 6.30 ಕ್ಕೆ ಹುಣ್ಣಿಮೆಯ ಪ್ರಯುಕ್ತ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಏರ್ಪಡಿಸಲಾಗಿದೆ. ಸೆ. 30 ರಂದು ಮಧ್ಯಾಹ್ನ 3 ಗಂಟೆಗೆ ಹರಾಜು ಕಾರ್ಯಕ್ರಮ, 4 ಗಂಟೆಗೆ ರಾಜ ಬೀದಿಗಳಲ್ಲಿ ಮೆರವಣಿಗೆ ಮೂಲಕ ಗಣಪತಿ ವಿಸರ್ಜನಾ ಕಾರ್ಯಕ್ರಮ ನೆರವೇರಲಿದೆ.