ಪ್ರವಾದಿ ಮಹಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಆಚರಿಸುವ ಈದ್ ಮಿಲಾದ್ ಹಬ್ಬವನ್ನು ಮಲೇಬೆನ್ನೂರು ಪಟ್ಟಣದಲ್ಲಿ ಇಂದು ಮನೆಗಳಲ್ಲಿ ಆಚರಿಸಲಾಗುವುದು. ಅಂದು ಮಲೇಬೆನ್ನೂರಿನಲ್ಲಿ ವಾರದ ಸಂತೆ ಇರುವುದರಿಂದ ಈದ್ ಮಿಲಾದ್ ಮೆರವಣಿಗೆಯನ್ನು ನಾಳೆ ಶುಕ್ರವಾರ ಮಧ್ಯಾಹ್ನ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ, 3 ಗಂಟೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜುಮ್ಮ ಮಸೀದಿಯ ಆಡಳಿತಾಧಿಕಾರಿ ಡಾ.ನಿಸಾರ್ ತಿಳಿಸಿದ್ದಾರೆ.
January 13, 2025