1ರಂದು ಶ್ರೀ ಜಗದ್ಗುರು ಜಯವಿಭವ ವಿದ್ಯಾ ಸಂಸ್ಥೆಯ ಹಳೇ ವಿದ್ಯಾರ್ಥಿಗಳ ಸಭೆ

1ರಂದು ಶ್ರೀ ಜಗದ್ಗುರು ಜಯವಿಭವ  ವಿದ್ಯಾ ಸಂಸ್ಥೆಯ ಹಳೇ ವಿದ್ಯಾರ್ಥಿಗಳ ಸಭೆ

ದಾವಣಗೆರೆ ಸೆ. 26 – ನಗರದ ಎನ್‌.ಆರ್‌. ರಸ್ತೆಯಲ್ಲಿರುವ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆ 60 ವರ್ಷಗಳನ್ನು ಪೂರೈಸಿದ್ದು, ಸಂಸ್ಥೆಯ 60ನೇ ವರ್ಷದ ಸಂಭ್ರಮಾಚರಣೆಯನ್ನು ಆಚರಿಸುವ ಹಿನ್ನೆಲೆಯಲ್ಲಿ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆ, ಗುರುಬಸಮ್ಮ ವಿ.ಚಿಗಟೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಗುರುಬಸಮ್ಮ ವಿ.ಚಿಗಟೇರಿ ಹಿರಿಯ ಪ್ರಾಥಮಿಕ ಶಾಲೆ (ಕನ್ನಡ ಮತ್ತು ಆಂಗ್ಲ ಮಾಧ್ಯಮ), ಶಿವಣ್ಣ ಚಿಗಟೇರಿ ನರ್ಸರಿ ಶಾಲೆಗಳ ಹಳೆಯ ವಿದ್ಯಾರ್ಥಿಗಳ ಸಭೆಯನ್ನು ಅಕ್ಟೋಬರ್ 1 ರ ಭಾನುವಾರ ಬೆಳಿಗ್ಗೆ 10.30ಕ್ಕೆ ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆ ಆವರಣದಲ್ಲಿ ಮತ್ತು ಅದೇ ದಿನ ಮಧ್ಯಾಹ್ನ 3.30ಕ್ಕೆ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆ, ವೀರಭದ್ರಪ್ಪ ಎಂ.ಚಿಗಟೇರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಭೆಯನ್ನು ವಿನೋಬನಗರದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಶಾಲೆಗಳ ಹಳೆಯ ವಿದ್ಯಾರ್ಥಿಗಳು ಸಭೆಯಲ್ಲಿ ಪಾಲ್ಗೊಂಡು 60ನೇ ವರ್ಷದ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸಲಹೆ, ಸೂಚನೆ ನೀಡುವುದರ ಮೂಲಕ  ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡ ಬೇಕೆಂದು ಸಂಸ್ಥೆಯ ಕಾರ್ಯದರ್ಶಿಗಳು ಮತ್ತು ಆಡಳಿತ ಮಂಡಳಿಯವರು ಕೋರಿದ್ದಾರೆ. ವಿವರಕ್ಕೆ ಸಂಪರ್ಕಿಸಿ : ಹೆಚ್‌.ನಿಂಗಪ್ಪ (ಜಿವಿಸಿಹೆಚ್‌ಎಸ್‌) – 99866 16956, ಹಾಲಪ್ಪ (ಎಸ್‌ಜೆಜೆಎಂಹೆಚ್‌ಎಸ್‌) 9663620439, ಶ್ರೀಮತಿ ಶಿವಲೀಲಾ (ಎಜಿಹೆಚ್‌ಎಸ್‌) 9844493028, ಶ್ರೀಮತಿ ವೀರಮ್ಮ (ಜಿವಿಸಿ ಹೆಚ್‌ಪಿ ಎಸ್‌)  89711183791, ಶ್ರೀಮತಿ ಶೈಲಜಾ (ವಿಎಂಸಿಹೆಚ್‌ ಪಿಎಸ್‌) 9901312828, ಸುರೇಶ್‌ ನಾಯಕ್‌ (ಎಜಿಹೆಚ್‌ಎಸ್‌) 7975192370.

error: Content is protected !!