ದಾವಣಗೆರೆ, ಸೆ. 26 – ರಾಜ್ಯ ಸರ್ಕಾರವು 2022-23ನೇ ಸಾಲಿನ `ಗಾಂಧಿ ಗ್ರಾಮ ಪುರಸ್ಕಾರ’ ಮತ್ತು `ವಿಶೇಷ ಗಾಂಧಿ ಗ್ರಾಮ ಪುರಸ್ಕಾರ’ ಕ್ಕೆ ರಾಜ್ಯದ 31 ಜಿಲ್ಲೆಗಳ 237 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿದೆ. ಗಾಂಧಿ ಗ್ರಾಮ ಪುರಸ್ಕಾರಕ್ಕೆ 233 ಗ್ರಾ.ಪಂ. ಮತ್ತು ವಿಶೇಷ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಕುಂದಾಪುರ ತಾ. ಹೊಸಾಡು, ಉಡುಪಿ ತಾ. 80 ಬಡಗ ಬೆಟ್ಟು, ಹಳಿಯಾಳ ತಾ. ತಟ್ಟೇಗೇರಿ ಹಾಗೂ ಬೆಳವಟಿಗೆ ಗ್ರಾ.ಪಂ.ಗಳು ಆಯ್ಕೆಯಾಗಿವೆ. ದಾವಣಗೆರೆ ತಾಲ್ಲೂಕಿನ ಮುದಹದಡಿ, ಹರಿಹರ ತಾಲ್ಲೂಕಿನ ಜಿಗಳಿ, ಚನ್ನಗಿರಿ ತಾಲ್ಲೂಕಿನ ಹಿರೇಮಳಲಿ, ಹೊನ್ನಾಳಿ ತಾಲ್ಲೂಕಿನ ರಾಂಪುರ ಮತ್ತು ನ್ಯಾಮತಿ ತಾಲ್ಲೂಕಿನ ಚಿ. ಕಡದಕಟ್ಟೆ, ಜಗಳೂರು ತಾಲ್ಲೂಕಿನ ಸೊಕ್ಕೆ ಗ್ರಾ.ಪಂ.ಗಳನ್ನು `ಗಾಂಧಿ ಗ್ರಾಮ ಪುರಸ್ಕಾರಕ್ಕೆ’ ಆಯ್ಕೆ ಮಾಡಲಾಗಿದೆ. ಅ. 2ರಂದು ವಿಧಾನಸೌಧದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.
January 10, 2025