ಶಿವಮೊಗ್ಗ, ಸೆ. 26- ಭದ್ರಾ ಜಲಾಶಯದ ಮುಂಗಾರು ಬೆಳೆಗಳಿಗೆ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರನ್ನು ಸರದಿಯನ್ವಯ ಹರಿಸಲಾಗುವುದು ಎಂದು ಕ.ನೀ.ನಿ.ನಿ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಹಾಗೂ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಸುಜಾತ ತಿಳಿಸಿದ್ದಾರೆ.
ಭದ್ರಾ ಬಲದಂಡೆ ನಾಲೆಗಳಿಗೆ ಸೆಪ್ಟೆಂಬರ್ 26 ರ ಮಂಗಳವಾರ ರಾತ್ರಿಯಿಂದ ಅಕ್ಟೋಬರ್ 15 ರವರೆಗೆ ಒಟ್ಟು 20 ದಿನ ನೀರು ಹರಿಸಲಾಗುವುದು. ನಂತರ ಮತ್ತೆ 10 ದಿವಸ ನಾಲೆಯಲ್ಲಿ ನೀರು ಬಂದ್ ಮಾಡಿ ಅಕ್ಟೋಬರ್ 26 ರಿಂದ ನವೆಂಬರ್ 17 ರವರೆಗೆ ಒಟ್ಟು 23 ದಿನಗಳ ಕಾಲ ನೀರನ್ನು ಹರಿಸಲಾಗುವುದು.
ಜಿಲ್ಲೆಯ ರೈತರನ್ನು ಮೂರ್ಖರನ್ನಾಗಿಸುವ ತಂತ್ರ
ದಾವಣಗೆರೆ, ಸೆ. 27- ಇಂದಿನಿಂದ ಭದ್ರಾ ನಾಲೆಗಳಲ್ಲಿ ನೀರು ಹರಿಸುವುದಾಗಿ ಭದ್ರಾ ನೀರಾವರಿ ಸಲಹಾ ಸಮಿತಿ ಕಾರ್ಯದರ್ಶಿ ಸುಜಾತ ಹೇಳಿದ್ದಾರೆ.
ಇದು ಆಫ್ ಅಂಡ್ ಆನ್ ಪದ್ಧತಿ ಯಾಗಿದೆ. ಇದರಲ್ಲಿ ಯಾವ ಬದಲಾವಣೆ ಮಾಡಲಾಗಿಲ್ಲ. ರೈತರನ್ನು ಮೂರ್ಖರ ನ್ನಾಗಿಸುವ ತಂತ್ರ ಎಂದು ರೈತ ಮುಖಂಡರಾದ ಕೊಳೇನಹಳ್ಳಿ ಬಿ.ಎಂ. ಸತೀಶ್ ಮತ್ತು ಬೆಳವನೂರು ನಾಗೇಶ್ವರರಾವ್ ಹೇಳಿದ್ದಾರೆ.
ನಮಗೆ ಆಫ್ ಅಂಡ್ ಆನ್ ಪದ್ಧತಿ ಬೇಡ. ಹಿಂದಿನ ಆದೇಶದಂತೆ ನಿರಂತರ 100 ದಿನ ನೀರು ಹರಿಸಬೇಕು. 20 ದಿನ ನೀರು ಹರಿಸಿ 10 ದಿನ ನೀರು ಹರಿಸದಿರುವುದು ಆಫ್ ಅಂಡ್ ಆನ್ ಪದ್ಧತಿಯಾಗಿದೆ. ಇದರಿಂದ ಇಂಟರ್ನಲ್ ರೊಟೇಶನ್ ಸೇರಿ 20 ದಿನ ನೀರು ಸಿಗುವುದಿಲ್ಲ. ಆಗ ಭತ್ತದ ಬೆಳೆ ಒಣಗಿ ನಾಶವಾಗುತ್ತದೆ. ಪ್ರಸ್ತುತ ಈಗ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ 10 ದಿನ ನೀರು ನಿಲುಗಡೆ ಮಾಡಿದರೂ ಬೆಳೆ ಒಣಗಿ ನಾಶವಾಗಿಲ್ಲ. ಆದ್ದರಿಂದ ನಿರಂತರ ನೀರು ಹರಿಸುವ ಪದ್ಧತಿ ಜಾರಿ ಮಾಡುವವರೆಗೂ ರೈತರ ಹೋರಾಟ ನಿಲ್ಲುವುದಿಲ್ಲ ಎಂದವರು ಹೇಳಿದ್ದಾರೆ.
ಭದ್ರಾ ಎಡದಂಡೆ ನಾಲೆಗಳಿಗೆ ಈಗಾಗಲೇ ನೀರನ್ನು ಹರಿಸಲಾಗಿದ್ದು, ಅಕ್ಟೋಬರ್ 1 ರವರೆಗೆ ಒಟ್ಟು 15 ದಿನ ನೀರನ್ನು ಹರಿಸಲಾಗುತ್ತದೆ. ನಂತರ 10 ದಿವಸ ನಾಲೆಯಲ್ಲಿ ನೀರು ಬಂದ್ ಮಾಡಿ ಅಕ್ಟೋಬರ್ 12 ರಿಂದ 26 ರವರೆಗೆ ಒಟ್ಟು 15 ದಿನಗಳು ನೀರು ಹರಿಸಿ, ಪುನಃ 10 ದಿವಸ ಬಂದ್ ಮಾಡಿ, ನವೆಂಬರ್ 6 ರಿಂದ 17 ರವರೆಗೆ ಒಟ್ಟು 12 ದಿನಗಳ ಕಾಲ ನೀರನ್ನು ಹರಿಸಲಾಗುವುದೆಂದು ಸುಜಾತ ಅವರು ತಿಳಿಸಿದ್ದಾರೆ.