ನಗರದಲ್ಲಿ ಇಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಇಂದು ಬೆಳಿಗ್ಗೆ 11 ಕ್ಕೆ ಎಸ್.ಎಸ್ ಕನ್ವೇಂನ್ಷನ್‌ ಸೆಂಟರ್‍ನ ಪಾರ್ವತಿ ಪರ್ಲ್ ಮಿನಿ ಹಾಲ್‍ನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 2020-26 ನೇ ಪ್ರವಾಸೋದ್ಯಮ ನೀತಿಯಲ್ಲಿ ಲಭ್ಯವಿರುವ ಇಲಾಖೆಯ ಯೋಜನೆಗಳ ಕುರಿತು ಕಾರ್ಯಾಗಾರ ನಡೆಯಲಿದೆ. ಕಾರ್ಯಾಗಾರವನ್ನು `ಟೂರಿಸಮ್ ಅಂಡ್ ಗ್ರೀನ್ ಇನ್ವೆಸ್ಟ್‍ಮೆಂಟ್’ ಎಂಬ ಸಂದೇಶದೊಂದಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ, ಪ್ರವಾಸೋದ್ಯಮ ಇಲಾಖೆಯಲ್ಲಿ ತೊಡಗಿರುವ ಭಾಗಿದಾರರ ಹಾಗೂ ಹೂಡಿಕೆದಾರರ ಸಹಭಾಗಿತ್ವದಲ್ಲಿ ಆಚರಿಸಲಾಗುತ್ತಿದೆ.

error: Content is protected !!