ದಾವಣಗೆರೆ, ಸೆ. 17 – ನಗರದ ನಿಜಲಿಂಗಪ್ಪ ಬಡಾವಣೆ, 4ನೇ ಮೇನ್, 4ನೇ ಕ್ರಾಸ್, ಡೋ. ನಂ. 926ರಲ್ಲಿರುವ ಫುಟ್‌ಬಾಲ್ ಆಟಗಾರ ಅಬ್ಬಣ್ಣ ಅವರ ಮನೆಯಲ್ಲಿ ದಿನಾಂಕ 18.9.2023ರಂದು ಆರ್ಜೇಂಟೈನಾದ ಪ್ರಸಿದ್ಧ ಪುಟ್‌ಬಾಲ್ ಆಟಗಾರ ಲಿಯಾನೋ ಮೆಸ್ಸಿ ಅವರ ಪ್ರತಿರೂಪದ ಗಣೇಶ ಪ್ರತಿಷ್ಟಾಪನೆ ಮಾಡಲಿದ್ದಾರೆ.
ಮೂರು ದಿನಗಳ ಕಾಲ ಪ್ರತಿಷ್ಟಾಪನೆ ಮಾಡಲಿದ್ದು, ದಿನಾಂಕ 20.9.2023ರಂದು ವಿಸರ್ಜನೆ ಮಾಡಲಿದ್ದಾರೆ.
ನಗರದ ಫುಟ್‌ಬಾಲ್ ಪ್ರೇಮಿಗಳಿಗೆ ಗಣೇಶ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಫುಟ್‌ಬಾಲ್ ಪ್ರೇಮಿಗಳು ಮೆಸ್ಸಿ ಪ್ರತಿರೂಪದ ಗಣೇಶನ ದರ್ಶನ ಪಡೆಯಬೇಕೆಂದು ಪುಟ್‌ಬಾಲ್ ಆಟಗಾರ ಅಬ್ಬಣ್ಣ (ಮೊ. 70263 94474) ಕೋರಿದ್ದಾರೆ.