ದಾವಣಗೆರೆ, ಸೆ. 15- ತೋಳಹುಣಸೆ ಬಳಿಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿ ಶಾಲೆ ಮತ್ತು ಶ್ರೀಮತಿ ಶಾಮನೂರು ಶಿವಶಂಕರಪ್ಪ ಕಾಲೇಜು ಶಿವಗಂಗೋತ್ರಿಯಲ್ಲಿ ನಾಳೆ ದಿನಾಂಕ 16 ರ ಶನಿವಾರ ಬೆಳಿಗ್ಗೆ 9 ಕ್ಕೆ ನಾಲ್ಕನೆಯ ಆವೃತ್ತಿಯ `ಸಂಭ್ರಮ್-2023′ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಉಪನ್ಯಾಸಕ ಶಂಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕನ್ನಡದ ಚಿತ್ರ ನಟಿ ಮೇಘನಾ ರಾಜ್, ಉದ್ಯಮಿ ಎಸ್.ಎಸ್. ಗಣೇಶ್, ಡಾ. ಪ್ರಭಾ ಮಲ್ಲಿಕಾರ್ಜುನ್, ಮಂಜುನಾಥ್, ರಂಗರಾಜ್ ಆಗಮಿಸಲಿದ್ದಾರೆ. ವಿಶೇಷವಾಗಿ ಮಲ್ಲಕಂಬ, ಯಕ್ಷಗಾನ ಪ್ರದರ್ಶನ ಕೂಡ ನಡೆಯಲಿದೆ. ಸುಮಾರು 38 ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸುದ್ದಿಗೋಷ್ಠಿಯಲ್ಲಿ ಪಿ.ಬಿ. ಪ್ರಭು, ಹೆಚ್.ಜಿ. ಉಮಾಪತಿ, ವಿಲ್ಸನ್ ಉಪಸ್ಥಿತರಿದ್ದರು.
September 22, 2023