ಉಚಿತ ಕೃತಕ ಅಂಗ ಜೋಡಣೆ ಶಿಬಿರ

ದಾವಣಗೆರೆ, ಸೆ. 15- ಹರಿ ಓಂ ಸ್ಮೈಲ್ ಹಾಗೂ ಭಗವಾನ್ ಮಹಾವೀರ ವಿಕಲಾಂಗ ಸಹಾಯತ ಸಮಿತಿಯವರಿಂದ ಬರುವ ಅಕ್ಟೋಬರ್ 10  ಮತ್ತು 11 ರಂದು ಗುರುದ್ವಾರ ಸದ್‍ಸಂಗತ್ ಜಾಲ ಹಳ್ಳಿ ಪಶ್ಚಿಮ, ಹೆಚ್.ಎಂ.ಟಿ ಎಸ್ಟೇಟ್, ಬೆಂಗಳೂರು-560015 ಇಲ್ಲಿ ಉಚಿತ ಮೆಗಾ ಕೃತಕ ಅಂಗ ಜೋಡಣೆ ಶಿಬಿರವನ್ನು ಆಯೋಜಿಸಲಾಗಿದೆ. ದಾವಣಗೆರೆ ಜಿಲ್ಲೆಯ ವಿಶೇಷಚೇತನರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ವಿಜಯಲಕ್ಷ್ಮಿ ಜಿಂದಾಲ (9035744512), ಸಂದೀಪ್ (7411700974), ಸಂಧ್ಯಾ   (9019 176767) ಅವರನ್ನು ಸಂಪರ್ಕಿಸಬಹುದೆಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ|| ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.

error: Content is protected !!