ದಾವಣಗೆರೆ, ಸೆ.9- ತಾಲ್ಲೂಕಿನ ಆನಗೋಡು ಗ್ರಾಮದ ಬಳಿ ನಿನ್ನೆ ಬೆಳಿಗ್ಗೆ ಪಾದಾಚಾರಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟಿದ್ದಾನೆ. ತೀವ್ರ ಗಾಯಗೊಂಡಿದ್ದ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಫಲಕಾರಿಯಾಗಲಿಲ್ಲ. ಸುಮಾರು 30 ವರ್ಷ ವಯಸ್ಸಿನ ಈತ, ತೆಳ್ಳನೆ ಮೈಕಟ್ಟು ಹೊಂದಿದ್ದು, ಕಾಫಿ ಕಲರ್ ಸ್ವೆಟ್ಟರ್, ನೀಲಿ ಬಣ್ಣದ ಷರ್ಟ್, ಬೂದು ಬಣ್ಣದ ಇನ್ನೊಂದು ಷರ್ಟ್, ನೀಲಿ ಬಣ್ಣದ ನಿಕ್ಕರ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಈ ಚಹರೆಯುಳ್ಳ ವ್ಯಕ್ತಿಯ ಮಾಹಿತಿ ತಿಳಿದವರು ಗ್ರಾಮಾಂತರ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು. ದೂರವಾಣಿ : 08192-253100, 94808 03256, 94808 03222.
January 9, 2025