ದಾವಣಗರೆ, ಸೆ. 10 – ಛತ್ತೀಸ್‍ಘಡ ರಾಜ್ಯದ ಬಿಲಯ್ ನಗರದಲ್ಲಿ ಕಳೆದ ವಾರ ನಡೆದ 29ನೇ ರಾಷ್ಟ್ರೀಯ ಬೆಂಚ್ ಪ್ರೆಸ್ ಹಾಗು ಡೆಡ್ ಲಿಫ್ಟಿಂಗ್ ಸ್ಪರ್ಧೆಗಳು ಪುರುಷರ, ಮಹಿಳೆಯರ ಹಾಗು ಮಾಸ್ಟರ್ಸ್ ವಿಭಾಗದಲ್ಲಿ ನಡೆದಿದ್ದವು.
ಈ ಸ್ಪರ್ಧೆಗಳಲ್ಲಿ ಹರಿಹರ ಬ್ರದರ್ಸ್ ಜಿಮ್‍ನಿಂದ 4 ಜನ ಕ್ರೀಡಾಪಟುಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ, 59 ಕೆಜಿ ವಿಭಾಗದಲ್ಲಿ ಖಾಜ ಮೋಹಿನೋದ್ದಿನ್ ಅವರು ಭಾಗವಹಿಸಿ ಬೆಸ್ಟ್ ಬೆಂಚ್ ಪ್ರೆಸರ್ ಆಫ್ ಇಂಡಿಯಾ-2023ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮುಂದೆ ನಡೆಯಲಿರುವ ಅಂತರರಾಷ್ಟ್ರೀಯ ಬೆಂಚ್ ಸ್ಪರ್ದೆಗಳಿಗೆ ಆಯ್ಕೆಯಾಗಿರುತ್ತಾರೆ. ಇದೇ ಸ್ಪರ್ಧೆಗಳಲ್ಲಿ 73 ಕೆಜಿ ತೂಕದ ವಿಭಾಗದಲ್ಲಿ ಶಹಬಾಜ್ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ. ವಿಜೇತ ಕ್ರೀಡಾಪಟುಗಳಿಗೆ ಬ್ರದರ್ಸ್ ಜಿಮ್ ಸಂಚಾಲಕ, ಅಂತರರಾಷ್ಟ್ರೀಯ ದೇಹದಾರ್ಢ್ಯ ಪಟು ಅಕ್ರಂ ಬಾಷ, ತರಬೇತುದಾರ ಮಹಮ್ಮದ್ ರಫೀಕ್ ಸೇರಿದಂತೆ ಎಲ್ಲಾ ಕ್ರೀಡಾಪಟುಗಳು ಶುಭ ಹಾರೈಸಿದ್ದಾರೆ.