ಗಂಗನರಸಿಯಲ್ಲಿ ಇಂದು – ನಾಳೆ ಶ್ರಾವಣ ಮಾಸದ ವಿಶೇಷ ಪೂಜೆ

ಹರಿಹರ ತಾಲ್ಲೂಕಿನ ಗಂಗನರಸಿ ಗ್ರಾಮದ ಶ್ರೀ ಗೋಣಿ ಬಸವೇಶ್ವರ ಮಠ ಹಾಗೂ ಶ್ರೀ ಹನುಮಂತ ದೇವರ ಜೀರ್ಣೋದ್ಧಾರ ಸಮಿತಿ ಆಶ್ರಯದಲ್ಲಿ ಶ್ರಾವಣ ಮಾಸದ ನಿಮಿತ್ಯ ಇಂದು ಮತ್ತು ನಾಳೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.

ಇಂದು ಪ್ರಾತಃಕಾಲದಲ್ಲಿ ಗೋಣಿ ಬಸವೇಶ್ವರ ಹಾಗೂ ನಾಗದೇವತಾ ಸ್ವಾಮಿಗಳಿಗೆ ಅಭಿಷೇಕ ಹಾಗೂ ಪೂಜಾ ಮತ್ತು ಮಹಾಮಂಗಳಾರತಿ ನಡೆಯುವುದು. ನಂತರ 10.30 ಕ್ಕೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.  ಸಂಜೆ ಭಜನಾ ಕಾರ್ಯಕ್ರಮ ನಡೆಯುವುದು. 

ಪ್ರಸಾದದ ವ್ಯವಸ್ಥೆಯನ್ನು ನಿವೃತ್ತ ಉಪಕುಲಪತಿಗಳಾದ ದೀಟೂರು ಡಾ.ಹೆಚ್‌. ಮಹೇಶ್ವರಪ್ಪ ಹಾಗೂ ಮಕ್ಕಳು ನಡೆಸಿಕೊಡುವರು.

ನಾಳೆ ಮಂಗಳವಾರ ಬೆಳಿಗ್ಗೆ 9 ಗಂಟೆುಯಿಂದ ಶ್ರೀ ಗೋಣಿ ಬಸವೇಶ್ವರ ಸ್ವಾಮಿಯ ಪಾಲಿಕೆ ಉತ್ಸವ ನಡೆಯುವುದು. ಉತ್ಸವದಲ್ಲಿ ಭಕ್ತಾದಿಗಳು ಕುರುಹು ಕೇಳುವ ಕಾರ್ಯಕ್ರಮ ನಡೆಯುವುದು ಎಂದು ಕಾರ್ಯದರ್ಶಿ ಗೌಡ್ರ ಚನ್ನಬಸಪ್ಪ ತಿಳಿಸಿದ್ದಾರೆ.

error: Content is protected !!