ಕನ್ನಡ ಚಿತ್ರರಂಗದ ಹೆಸರಾಂತ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಮತ್ತು ಚಿತ್ರ ತಂಡವು ಮೂವಿ ಟೈಮ್ಸ್ ಹಾಗೂ ಗೀತಾಂಜಲಿ ಚಿತ್ರಮಂದಿರಕ್ಕೆ ಇಂದು ಆಗಮಿಸಲಿದೆ.
ಈಚೆಗೆ ಬಿಡುಗಡೆಯಾದ ಹೇಮಂತರಾವ್ ನಿರ್ದೇಶನದ `ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ವಿಜಯಯಾತ್ರೆಗಾಗಿ ಚಿತ್ರ ತಂಡ ಇಂದು ಬೆಳಿಗ್ಗೆ 10 ಗಂಟೆಗೆ ನಾಯಕ ರಕ್ಷಿತ್ ಶೆಟ್ಟಿ, ನಾಯಕ ನಟಿ ರುಕ್ಮಿಣಿ ವಸಂತ್, ನಿರ್ದೇಶಕ ಹೇಮಂತರಾವ್ ಮತ್ತು ತಂಡ ನಗರಕ್ಕೆ ಆಗಮಿಸಲಿದ್ದು, ಚಿತ್ರ ಕಲಾಭಿಮಾನಿಗಳು ಆಗಮಿಸಲು ಪಿ.ಹೆಚ್. ಮಂಜುನಾಥ್ ಕೋರಿದ್ದಾರೆ.