ದಾವಣಗೆರೆ, ಸೆ. 6 – ಶ್ರೀದಾ ಕಲೆಕ್ಷನ್ ವತಿಯಿಂದ ನಗರದ ರೋಟರಿ ಕ್ಲಬ್‌ನಲ್ಲಿ ಎರಡು ದಿನಗಳ ಮಾರಾಟ ಮೇಳ ನಡೆಯುತ್ತಿದೆ. ನಾಳೆ ದಿನಾಂಕ 7ರ ಗುರುವಾರ ಕೊನೆಯ ದಿನವಾಗಿದೆ.
ದೇಶದ ಮೂಲೆ ಮೂಲೆಗಳಿಂದ ಎಚ್ಚರಿಕೆಯಿಂದ ಆಯ್ದು ತರಿಸಲಾದ ಬೆಡಗಿನ ಸೀರೆಗಳು ನಿಮಗಾಗಿ ಲಭ್ಯವಿವೆ. ಭಾರತದ ಕರಕುಶಲಿಗಳ ಚಿತ್ತಾರ ಹಾಗೂ ವೈವಿಧ್ಯತೆಯನ್ನು ಬಿಂಬಿಸುವ ಸೀರೆಗಳು ಮಾರಾಟಕ್ಕಿವೆ.
ತೆಲಂಗಾಣದ ಗದ್ವಾಲ್‌ನ ಕರಕೌಶಲ್ಯದಿಂದ ರೂಪಿಸಲಾದ ಸೀರೆಗಳು ಈ ಬಾರಿಯ ವಿಶೇಷವಾಗಿವೆ. ಝರಿಗೆ ಪ್ರಸಿದ್ಧವಾಗಿರುವ ಈ ಸೀರೆಗಳು, ಕಡ್ಡಿಪೆಟ್ಟಿಗೆಯಲ್ಲಿ ಮಡಚಿಡುವಷ್ಟು ಹಗುರವಾಗಿವೆ.
ದೊಡ್ಡ ಕಂಚಿ ಅಂಚಿನ ಮನಮೋಹಕ ನೇಯ್ಗೆಯ ಹಾಗೂ ಗದ್ವಾಲ್ ಜೊತೆ ಕಲಮ್ಕಾರಿ ಇರುವ ಸೀರೆಗಳು ನಿಮ್ಮ ಮನಸೂರೆಗೊಳ್ಳುವುದು ನಿಶ್ಚಿತ. ಸಾಂಪ್ರದಾಯಿಕ ಮಾದರಿಯ ಕಾಂಚೀಪುರಂ ಸಿಲ್ಕ್ ಸೀರೆಗಳನ್ನು ಆಯ್ದು ತರಲಾಗಿದೆ. ಸಾಂಪ್ರದಾಯಿಕ ವೈಭವವನ್ನು ಆಧುನಿಕ ಸೊಬಗಿನಲ್ಲಿ ಬೆರೆಸುವ ರೀತಿಯಲ್ಲಿ ಸೀರೆಗಳಿವೆ. ವಿಶಿಷ್ಟವಾದ ರೇಷ್ಮೆ ಹಾಗೂ ಖಾದಿ ಸೀರೆಗಳು ಆಕರ್ಷಕವಷ್ಟೇ ಅಲ್ಲದೇ, ಕೈಗೆಟಕುವ ದರದಲ್ಲಿವೆ.